ಮಡಿಕೇರಿ, ನ. ೧೯: ನಗರದ ಹೊಸಬಡಾವಣೆಯ ಅಂಗನವಾಡಿಯಲ್ಲಿ ಮಕ್ಕಳದಿನಾಚರಣೆ ಆಚರಿಸಲಾಯಿತು. ಇದರ ಅಂಗವಾಗಿ ಮಕ್ಕಳಿಗಾಗಿ ಛದ್ಮವೇಶ ಏರ್ಪಡಿಸಲಾಗಿತ್ತು. ಆಕರ್ಷಕ ಉಡುಗೆ ತೊಡುಗೆಯೊಂದಿಗೆ ಆಗಮಿಸಿದ ಚಿಣ್ಣರು ಹಾಡು ಹೇಳಿ, ನೃತ್ಯ ಮಾಡಿ ಸಂಭ್ರಮಿಸಿದರು. ಭಾಗವಹಿಸಿದ ಪುಟಾಣಿಗಳಿಗೆ ಶಿಕ್ಷಕಿ ಮುತ್ತಮ್ಮ ಅವರು ಪ್ರಶಸ್ತಿ ವಿತರಿಸಿದರು. ಬಹುತೇಕ ಒಂದೂವರೆ ವರ್ಷದ ಬಳಿಕ ಅಂಗನವಾಡಿ ಆರಂಭವಾಗಿದ್ದು ಮಕ್ಕಳು ಮತ್ತು ಪೋಷಕರಲ್ಲಿ ಹೊಸ ಉತ್ಸಾಹ ತುಂಬಿಸಿತು.ಮಡಿಕೇರಿ: ನಗರದ ದೇಚೂರು (ಬಾಣೆಮೊಟ್ಟೆ)ಯಲ್ಲಿ ಮಕ್ಕಳ ದಿನಾಚರಣೆಯನ್ನು ದೇಚೂರು ಅಂಗನವಾಡಿಯ ಪುಟಾಣಿ ಮಕ್ಕಳು ಸಂಭ್ರಮದಿAದ ಆಚರಿಸಿದರು. ಅಂಗನವಾಡಿ ಕಾರ್ಯಕರ್ತೆ ಅಮುದ ಮುಖ್ಯ ಅತಿಥಿಯಾಗಿ ಸ್ಥಳೀಯ ನಿವಾಸಿಗಳಾದ ಅಂಜಪರವAಡ ಉಷಾ ಉತ್ತಯ್ಯ, ಉಪಾಧ್ಯಕ್ಷರು ಕೊಡಗು ಸೌಹಾರ್ದ ಸಹಕಾರಿ ಸಂಘ ಮಡಿಕೇರಿ, ಲಕ್ಷಿö್ಮ ಕುಟ್ಟಪ್ಪ, ಮಾಜಿ ನಗರಸಭಾ ಸದಸ್ಯರು ಹಾಗೂ ಜ್ಯೋತಿ ಜಿತೇಂದ್ರ, ಅಧ್ಯಕ್ಷರು ಬಾಲವಿಕಾಸ ಸಮಿತಿ ಇವರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳು ಪುಟಾಣಿ ಮಕ್ಕಳೊಂದಿಗೆ ಕೈಜೋಡಿಸಿ, ದೀಪ ಬೆಳಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಪುಟಾಣಿ ಮಕ್ಕಳು ವಿವಿಧ ಛದ್ಮವೇಷಧರಿಸಿ ಗಮನಸೆಳೆದರು. ಮನೋರಂಜನಾತ್ಮಕ ನೃತ್ಯ, ಕಾಳು ಹೆಕ್ಕುವುದು, ಕಪ್ಪೆ ಜಿಗಿತ ಮತ್ತು ಓಡುವ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು. ಅಂಗನವಾಡಿ ಸಹಾಯಕಿ ರೋಹಿಣಿ ಭಾಗವಹಿಸಿದ್ದರು. ಕೇಂದ್ರದ ವತಿಯಿಂದ ಎಲ್ಲರಿಗೂ ಬಾದಾಮಿ ಹಾಲು ವಿತರಿಸಿದರು.