ಸಿದ್ದಾಪುರ, ನ. ೧೯: ರಾಜ್ಯ ಮಟ್ಟದ ವುಶು ಚಾಂಪಿಯನ್ಶಿಪ್ ಸ್ಪರ್ಧೆಯ ಕಿಕ್ ಬಾಕ್ಸಿಂಗ್ ವಿಭಾಗದಲ್ಲಿ ನೆಲ್ಲಿಹುದಿಕೇರಿಯ ಶ್ರೀ ಚರಣ್ ಹಾಗೂ ಶ್ರೀಕುಮಾರ್ ಸಹೋದರರು ಚಿನ್ನ ಹಾಗೂ ಕಂಚಿನ ಪದಕ ಗೆದ್ದು ರಾಷ್ಟçಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ದಕ್ಷಿಣಕನ್ನಡ ವುಶು ಅಸೋಸಿಯೇಷನ್, ರಾಜ್ಯ ವುಶು ಅಸೋಸಿಯೇಷನ್, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ಮೂಡುಬಿದಿರೆ ಆಳ್ವಾಸ್ನಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಇದೀಗ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನೆಲ್ಲಿಹುದಿಕೇರಿ ಎಪಿಜೆ ಬಡಾವಣೆಯ ಕೆ.ಸಿ. ಶಶಿ ರೀನಾ ದಂಪತಿ ಪುತ್ರರಾಗಿರುವ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿ ಕೆ.ಎಸ್. ಶ್ರೀಚರಣ್ ಚಿನ್ನದ ಪದಕ ಗೆದ್ದರೆ ೯ನೇ ತರಗತಿ ವಿದ್ಯಾರ್ಥಿ ಆತನ ಸಹೋದರ ಕೆ.ಎಸ್. ಶ್ರೀಕುಮಾರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಕಲ್ಕತ್ತಾದಲ್ಲಿ ನಡೆಯುವ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ತರಬೆೆÃತುದಾರ ಸುದರ್ಶನ್ ಮಕ್ಕಂದೂರು ಇವರಿಗೆ ತರಬೇತಿ ನೀಡುತ್ತಿದ್ದಾರೆ.