ಸೋಮವಾರಪೇಟೆ, ನ. ೧೭: ರೋಟರಿ ಸಂಸ್ಥೆಯ ವತಿಯಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ೩ ರುದ್ರಭೂಮಿಯಲ್ಲಿ ಸಿಲಿಕಾನ್ ಚೇಂಬರ್‌ಗಳನ್ನು ಚೇಂಬರ್ ಅಳವಡಿಸಲಾಗುವುದು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಎ.ಆರ್.ರವೀಂದ್ರ ಭಟ್ ತಿಳಿಸಿದರು.

ಸೋಮವಾರಪೇಟೆ ರೋಟರಿ ಹಿಲ್ಸ್ ಸಂಸ್ಥೆಯ ವತಿಯಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ರಾಜ್ಯಪಾಲರ ಭೇಟಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕಿನ ನಾಕೂರು, ಕೂತಿ, ಬಜೆಗುಂಡಿ ಗ್ರಾಮದಲ್ಲಿ ಸಿಲಿಕಾನ್ ಚೆಂಬರ್ ಅಳವಡಿಸಲಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಂದರು.

ಸಭೆಯಲ್ಲಿ ರೋಟರಿ ಸಹಾಯಕ ರಾಜ್ಯಪಾಲ ಎಚ್.ಟಿ.ಅನಿಲ್, ರೋಟರಿ ಅಧ್ಯಕ್ಷ ಎಂ.ಎA. ಪ್ರಕಾಶ್‌ಕುಮಾರ್, ವಲಯ ಕಾರ್ಯದರ್ಶಿ ವಸಂತ ಕುಮಾರ್, ಕಾರ್ಯದರ್ಶಿ ಡಿ.ಪಿ.ಧರ್ಮಪ್ಪ ಉಪಸ್ಥಿತರಿದ್ದರು.