ನಾಪೆೆÇÃಕ್ಲು, ನ. ೧೭: ಕನ್ನಡ ನಾಡಿನ ಜೀವನದಿ, ಜಿಲ್ಲೆಯ ಜನರ ಭಕ್ತಿಯ ಕಾವೇರಿ ನದಿಯಲ್ಲಿ ಮರಳುಗಾರಿಕೆ ನಡೆಸದಂತೆ ಕೊಡಗು -ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರಿಗೆ ನಾಪೋಕ್ಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಪ್ಪನೆರವಂಡ ಕಿರಣ್ ಕಾರ್ಯಪ್ಪ ಮನವಿ ಸಲ್ಲಿಸಿದ್ದಾರೆ.

ಮರಳು ತೆಗೆಯುವ ನೆಪದಲ್ಲಿ ಕಾವೇರಿ ನದಿಯ ಒಡಲು ಬಗೆಯಲಾಗುತ್ತಿದೆ. ಜೆಸಿಬಿ ಬಳಸಿ ಕಾವೇರಿ ನದಿಯ ಸ್ವರೂಪವನ್ನೇ ಬದಲಿಸಲಾಗಿದೆ. ಇದು ಹೀಗೆ ಮುಂದುವರೆದರೆ ಕಾವೇರಿ ತನ್ನ ಹರಿವಿಕೆಯನ್ನು ಬದಲಿಸುವ ಅಪಾಯ ಎದುರಾಗಿದೆ. ಆದುದರಿಂದ ಮರಳು ತೆಗೆಯಲು ನೀಡಿದ ಟೆಂಡರ್ ಅನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಮನವಿ ಪತ್ರದ ಮೂಲಕ ಕೋರಿಕೊಂಡಿದ್ದಾರೆ. ಅದರೊಂದಿಗೆ ಬೇತುವಿನಿಂದ ನಾಪೋಕ್ಲು-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಹೆಚ್ಚುವರಿಯಾಗಿ ೧೫ ಲಕ್ಷ ರೂ. ಬಿಡುಗಡೆ ಮಾಡುವದರ ಮೂಲಕ ರಸ್ತೆಯನ್ನು ಕಾಂಕ್ರೀಟಿಕರಣ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.