ಮಡಿಕೇರಿ, ನ. ೧೭: ತನುಶ್ರೀ ಪ್ರಕಾಶನ ಸಂಸ್ಥೆ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಪ್ರಶಸ್ತಿಗೆ ಕೊಡಗಿನ ಸಾಹಿತಿ ನೌಶದ್ ಜನ್ನತ್ ಸೇರಿದಂತೆ ವಿವಿಧ ಕ್ಷೇತ್ರದ ಐವರು ಆಯ್ಕೆಯಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ನೌಶದ್ ಜನ್ನತ್ ಸಾಧನೆ ಗುರುತಿಸಿ ತನುಶ್ರೀ ವಾರ್ಷಿಕ ಸಾಧಕ ಪುರಸ್ಕಾರ ನೀಡಿ ಸಂಸ್ಥೆ ಗೌರವಿಸಿದೆ ಎಂದು ಪ್ರಕಟಣೆ ತಿಳಿಸಿದೆ.