*ಸಿದ್ದಾಪುರ ನ.೧೮ : ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ತಾ. ೨೦ ರಂದು ಹುತ್ತರಿ ಹಬ್ಬ ಆಚರಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಪಾಲಚಂಡ ಚಿಯ್ಯಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಅಂದು ಸಂಜೆ ೬.೩೦ ಗಂಟೆಗೆ ವೆಳ್ಳಾಟಂ ನಡೆಯಲಿದ್ದು, ದೇವಾಲಯದ ಗದ್ದೆಯಲ್ಲಿ ೭.೩೫ ಕ್ಕೆ ನೆರೆ ಕಟ್ಟುವುದು, ೮.೩೫ ಕ್ಕೆ ಕದಿರು ಕುಯ್ಯುವುದು ಮತ್ತು ೯.೩೫ ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.