ಮಡಿಕೇರಿ, ನ. ೧೭: ಪಟ್ಟಣದ ಮಿನಿ ವಿಧಾನ ಸೌಧದ ಎದುರು ಇರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಅರಮೇರಿ - ಕಳಂಚೇರಿ ಮಠದ ದಿಶಾ ಎಕ್ಸ್ಪಿರಿಯನ್ಸ್ ಲರ್ನ್ ಸಂಸ್ಥೆಯ ವತಿಯಿಂದ ಮಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಪುಷ ಮಡಿಕೇರಿ, ನ. ೧೭: ಪಟ್ಟಣದ ಮಿನಿ ವಿಧಾನ ಸೌಧದ ಎದುರು ಇರುವ ಹುತಾತ್ಮ ಯೋಧರ ಸ್ಮಾರಕಕ್ಕೆ ಅರಮೇರಿ - ಕಳಂಚೇರಿ ಮಠದ ದಿಶಾ ಎಕ್ಸ್ಪಿರಿಯನ್ಸ್ ಲರ್ನ್ ಸಂಸ್ಥೆಯ ವತಿಯಿಂದ ಮಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಪುಷ ಎಂಬುವುದಿಲ್ಲ. ಆತನಿಗೆ ದೇಶ ಸಂರಕ್ಷಣೆ ಮಾತ್ರ ಮುಖ್ಯ ಗುರಿಯಾಗಿರುತ್ತದೆ. ಕರ್ತವ್ಯದ ಸಂದರ್ಭ ಸೈನಿಕರಿಗೆ ಎಲ್ಲಾ ರೀತಿ ಸವಾಲು ಎದುರಾಗುತ್ತದೆ. ಹೀಗೆ ಸೈನಿಕ ದೇಶಕ್ಕಾಗಿ ಅರ್ಪಿಸಿಕೊಳ್ಳುತ್ತಾರೆ ಎಂದರು.
ದಿಶಾ ಸಂಸ್ಥೆಯ ಸಂಯೋಜಕಿ ಬಲ್ಲಚಂಡ ಕುಸುಮ ಮಾತನಾಡಿ, ಸಂಸ್ಥೆ ವತಿಯಿಂದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾಗಿ ಆಯ್ಕೆಯಾಗಿ ಸ್ಥಳೀಯರು ಈಗ ಹತ್ತು ವರ್ಷ ಸೇವೆ ಪೂರೈಸಿದ ಹಿನ್ನಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿದ್ದು, ಇದರ ಪ್ರಯುಕ್ತ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭ ದಿಶಾ ಸಂಸ್ಥೆಯ ಸಂಯೋಜಕ ಪ್ರೀತಂ ಪೊನ್ನಪ್ಪ, ಮಾಜಿ ಸೈನಿಕರ ಸಹಕಾರ ಸಂಘದ ಉಪಾಧ್ಯಕ್ಷ ಚಪ್ಪಂಡ ಹರೀಶ್ ಉತ್ತಪ್ಪ ಆಡಳಿತ ಮಂಡಳಿ ಸದಸ್ಯ ಕಾವಾಡಿಚಂಡ ಗಣಪತಿ, ಪುಗ್ಗೇರ ನಂದ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.