ಕೂಡಿಗೆ, ನ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮ ಸಮೀಪದ ಗಂಧದ ಹಾಡಿಗೆ ಹೋಗುವ ರಸ್ತೆಯ ಎರಡೂ ಕಡೆಗಳಲ್ಲಿ ಗಿಡಗಂಟಿಗಳು ಬೆಳೆದು ದಾರಿಕಾಣದೆ ಕಾಡುಮಯವಾಗಿತ್ತು. ಈ ರಸ್ತೆಯನ್ನು ಹಾಡಿ ಯುವಕರು ಮತ್ತು ಮುಖಂಡರು ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಹುದುಗೂರು ವ್ಯಾಪ್ತಿಯ ಗಂಧದ ಗಿರಿಜನ ಹಾಡಿಯು ಹುದುಗೂರು ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿದೆ. ಈ ರಸ್ತೆಯ ಅಂಚಿನಲ್ಲಿ ಕಾಡಾನೆಗಳು ನಿಂತರೂ ಸಹ ಕಾಣುತ್ತಿರಲಿಲ್ಲ. ಇದರಿಂದಾಗಿ ಹಾಡಿಯ ಜನರು ಸ್ವತಃ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಕಡಿಯುವ ಮೂಲಕ ಶ್ರಮದಾನ ಮಾಡಿದರು. ಹಾಡಿಯ ಮುಖ್ಯಸ್ಥರಾದ ರಘು, ಮೋಹನ್, ಗಣೇಶ್ ಪುಟ್ಟ, ರಮೇಶ್ ರಾಜಣ್ಣ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.