ಕೂಡಿಗೆ, ನ. ೧೮: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಭುವನಗಿರಿ ವ್ಯಾಪ್ತಿಯಲ್ಲಿ ಚಿರತೆ ಹಾವಾಳಿ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಪಂಜರ ಅಳವಡಿಸಲಾಗುತ್ತಿದೆ.

ಸೀಗೆಹೊಸೂರು ಜೇನುಕಲ್ಲು ಬೆಟ್ಟದ ಗ್ರಾಮದ ನಿವಾಸಿ ಕಣ್ಣಮ್ಮ ಅವರ ಜಮೀನಿನ ಸಮೀಪದಲ್ಲಿ ಪಂಜರ ಇಡಲಾಗಿದೆ. ರೈತರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯ ತಾಲೂಕು ಅಧಿಕಾರಿಗಳ ಸೂಚನೆಯಂತೆ ಹೆಬ್ಬಾಲೆ ಉಪ ವಲಯ ಅರಣ್ಯ ಅಧಿಕಾರಿ ಭರತ್ ಮತ್ತು ಸಿಬ್ಬಂದಿ ವರ್ಗದವರು ಗ್ರಾಮಸ್ಥರ ಸಹಕಾರದೊಂದಿಗೆ ಪಂಜರ ಇರಿಸಿದ್ದಾರೆ.