ಮಡಿಕೇರಿ, ನ. ೧೭ : ಹವಾಮಾನ ವೈಪರೀತ್ಯದಿಂದಾಗಿ ವರ್ಷ ಅಂತ್ಯ ಸಮೀಸುತ್ತಿದ್ದರೂ ವರ್ಷಾಧಾರೆ ನಿಲ್ಲದೇ ಇರುವುದು ಬೆಳೆಗಾರರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಅಕಾಲಿಕ ಮಳೆಯಿಂದಾಗಿ ಕುಯ್ಲಿಗೆ ಬರುವ ಮುನ್ನವೇ ಕಾಫಿ ಹಣ್ಣುಗಳು ಉದುರತೊಡಗಿವೆ. ಇನ್ನು ಕುಯ್ಲಿಗೆ ಬಂದಿರುವ ಅರೇಬಿಕಾ ಕಾಫಿಯನ್ನು ಕುಯ್ಲು ಮಾಡಿದ ಬೆಳೆಗಾರ ಒಲೆ ಉರಿಯಲ್ಲಿ ಕಾಫಿ ಒಣಗಿಸುವ ಪರಿ ಸೃಷ್ಟಿಯಾಗಿದೆ.

ಮಳೆಯಿಂದಾಗಿ ಆಗಿರುವ ಬೆಳೆ(ಕಾಫಿ, ಕೃಷಿ, ತೋಟಗಾರಿಕೆ) ನಷ್ಟವನ್ನು ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿಯಾಗಿ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಲಾಗಿದ್ದು, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಆಫ್ ಮಾರ್ಗಸೂಚಿ ಅನ್ವಯ ಪರಿಹಾರ ದೊರಕಬೇಕಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸಮೀಕ್ಷೆ ನಡೆದಿದ್ದು, ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ಸಂಭವಿಸಿದ ಬೆಳೆನಷ್ಟದನುಸಾರು ತಾಲೂಕಿನ ೧೬ ಗ್ರಾಮಗಳಲ್ಲಿ ಶೇ.೩೩ ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವುದಾಗಿ ಗುರುತಿಸಲಾಗಿದೆ. ಈ ಗ್ರಾಮಗಳ ರೈತರಿಗೆ ಪರಿಹಾರ ದೊರಕುವ ಭರವಸೆ ಲಭಿಸಿದೆ.

ಮಡಿಕೇರಿ ತಾಲೂಕಿನ ೯೪ ಗ್ರಾಮಗಳಲ್ಲಿ ೨೪,೨೦೬ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತೆ. ಆದರೆ ಈ ಎಲ್ಲಾ ಗ್ರಾಮಗಳಿಗೆ ಸಮೀಕ್ಷೆ ತಂಡ ಭೇಟಿ ದೊರಕಬೇಕಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸಮೀಕ್ಷೆ ನಡೆದಿದ್ದು, ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ಸಂಭವಿಸಿದ ಬೆಳೆನಷ್ಟದನುಸಾರು ತಾಲೂಕಿನ ೧೬ ಗ್ರಾಮಗಳಲ್ಲಿ ಶೇ.೩೩ ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವುದಾಗಿ ಗುರುತಿಸಲಾಗಿದೆ. ಈ ಗ್ರಾಮಗಳ ರೈತರಿಗೆ ಪರಿಹಾರ ದೊರಕುವ ಭರವಸೆ ಲಭಿಸಿದೆ.

ಮಡಿಕೇರಿ ತಾಲೂಕಿನ ೯೪ ಗ್ರಾಮಗಳಲ್ಲಿ ೨೪,೨೦೬ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತೆ. ಆದರೆ ಈ ಎಲ್ಲಾ ಗ್ರಾಮಗಳಿಗೆ ಸಮೀಕ್ಷೆ ತಂಡ ಭೇಟಿ ತಾಲೂಕೆಂದು, ಆಗಸ್ಟ್ ತಿಂಗಳಿನಲ್ಲೇ ಘೋಷಣೆಯಾದರೂ ಸಹ ಕಾಲೂರು, ಹಚ್ಚಿನಾಡು ಹಾಗೂ ಹಮ್ಮಿಯಾಲ ಗ್ರಾಮಗಳು ಮಾತ್ರ ಸಮೀಕ್ಷೆ ಆಧಾರದಲ್ಲಿ ಶೇ.೩೦ ರಿಂದ ೩೫ ಬೆಳೆ ಹಾನಿಯಾಗಿರುವುದಾಗಿ ಸಮೀಕ್ಷೆಯ ವರದಿಯಲ್ಲಿ ಪ್ರಕಟಿಸಲಾಗಿದೆ.

(ಮೊದಲ ಪುಟದಿಂದ) ಉಳಿದೆಲ್ಲ ಗ್ರಾಮಗಳು ಶೇ.೩೦ ರಷ್ಟು ಬೆಳೆಹಾನಿಗಿಂತ ಕಡಿಮೆ ಇರುವುದಾಗಿ ಸಮೀಕ್ಷೆ ಹೇಳುತ್ತದೆ. ಈ ಗ್ರಾಮಗಳ ಬೆಳೆಗಾರರಿಗೆ ಪ್ರಸ್ತುತ ತಯಾರಿಸಿರುವ ವರದಿ ಅನುಸಾರ ಪರಿಹಾರ ದೊರಕುವುದು ಅಸಾಧ್ಯವಾಗಿದೆ.

ಪರಿಹಾರ ದೊರಕಬೇಕಾದರೆ, ಶೇ.೩೩ ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಬೇಕಿದೆ. ಆದರೆ, ಮೇಲ್ಕಂಡ ೩ ಗ್ರಾಮಗಳಲ್ಲಿ ೩೦ ರಿಂದ ೩೫ ಶೇ. ಬೆಳೆ ನಷ್ಟ ಎಂದು ಸಮೀಕ್ಷೆಯ ವರದಿಯಲ್ಲಿ ನಮೂದಿಸಲಾಗಿದ್ದು, ಸ್ಪಷ್ಟವಾಗಿ ಶೇ.೩೩ ಎಂದು ಇಲ್ಲದ ಕಾರಣ ಈ ಮೂರು ಗ್ರಾಮಗಳಿಗೂ ಯಾವುದೇ ಬೆಳೆ ಪರಿಹಾರ ದೊರಕುವುದು ಕಷ್ಟಸಾಧ್ಯ ಎಂದು ಹೇಳಲಾಗಿದೆ. ಸೋಮವಾರಪೇಟೆ ತಾಲೂಕಿನ ೧೬ ಗ್ರಾಮಗಳ ಬೆಳೆಗಾರರಿಗೆ ಪರಿಹಾರ ದೊರಕುವ ಭರವಸೆ ಇದೆಯಾದರು ಮಡಿಕೇರಿ ತಾಲೂಕಿನಲ್ಲಿ ಈಗಿರುವ ಸಮೀಕ್ಷೆ ವರದಿಯನುಸಾರ ಯಾವುದೇ ಪರಿಹಾರ ಒದಗುವುದು ಮರೀಚಿಕೆಯಾಗಿದೆ.

ಮಳೆಗಾಲದಲ್ಲಿ ಸಂಭವಿಸಿದ ಬೆಳೆ ಹಾನಿ ಅನುಸಾರ ವರದಿ ತಯಾರಾಗಿರುವ ಕಾರಣ, ಪ್ರಸ್ತುತ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಕಾಲಿಕ ಮಳೆ ಸುರಿಯುತ್ತಿದ್ದು ಮತ್ತಷ್ಟು ಬೆಳೆ ಹಾನಿ ಸಂಭವಿಸಿದೆ. ಆದುದರಿಂದ ಈಗಾಗಲೇ ತಯಾರಾಗಿರುವ ವರದಿ ಅನುಸಾರ ಪರಿಹಾರ ನೀಡುವುದು ಸಮಂಜಸವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಜಿಲ್ಲೆಯ ಬೆಳೆಗಾರರು ಮರುಸಮೀಕ್ಷೆ ಮಾಡುವಂತೆ ಒತ್ತಾಯಿಸಿದ್ದಾರೆ.

ವೀರಾಜಪೇಟೆಯಲ್ಲಿ ತಡೆ : ವೀರಾಜಪೇಟೆ ತಾಲೂಕಿನಲ್ಲಿಯೂ ಸಮೀಕ್ಷೆ ನಡೆಸಿರುವ ತಂಡ ವರದಿ ನೀಡಲು ತಡೆಹಿಡಿದಿದೆ. ಮಳೆ ಇನ್ನೂ ಸುರಿಯುತ್ತಲಿರುವ ಕಾರಣ, ಮರು ಸಮೀಕ್ಷೆ ನಡೆಸಿದ ನಂತರ ಪ್ರಸ್ತುತ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಉಂಟಾದ ನಷ್ಟವನ್ನೂ ತಮ್ಮ ಸಮೀಕ್ಷೆಯಲ್ಲಿ ಸೇರಿಸಿಕೊಂಡು ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವುದಾಗಿ ತಿಳಿದುಬಂದಿದೆ.

ಒಟ್ಟಿನಲ್ಲಿ ಆಗಸ್ಟ್-ಸೆಪ್ಟೆಂಬರ್ ತನಕ ಸುರಿದ ಮಳೆಗೆ ಸಂಭವಿಸಿರುವ ಬೆಳೆ ಹಾನಿ ಮಾತ್ರ ಸಮೀಕ್ಷೆ ನಡೆಸದೇ, ಇದಾದ ಬಳಿಕವೂ ಸುರಿದ, ಸುರಿಯುತ್ತಿರುವ ಅಕಾಲಿಕ ಮಳೆಗೆ ಉಂಟಾಗಿರುವ ಬೆಳೆ ಹಾನಿಯ ಸಮೀಕ್ಷೆ ನಡೆಸಿದರೆ ಮಾತ್ರ ಅರ್ಹರಿಗೆ ಪರಿಹಾರ ದೊರಕುವುದಾಗಿ ತಿಳಿದುಬಂದಿದೆ.

ಸರಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಡಿಕೇರಿ ತಾಲೂಕು ಮಾತ್ರ ಪ್ರವಾಹ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ಆದರೆ ಕೊಡಗು ಜಿಲ್ಲೆಯನ್ನೇ ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಿದರೆ, ಬೆಳೆ ಹಾನಿ ಪರಿಹಾರ ನೀಡಲು ಮತ್ತಷ್ಟು ಸಹಕಾರವಾಗಲಿದೆ. ಕೊಡಗು ಬೆಳೆಗಾರರ ಒಕ್ಕೂಟವು ಈ ಸಂಬAಧ ಈಗಾಗಲೇ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಮನವಿ ಮಾಡಿದ್ದು, ಸರಕಾರದ ಗಮನ ಸೆಳೆಯುವ ಭರವಸೆಯನ್ನು ಅವರು ನೀಡಿದ್ದಾರೆ.