ಮಡಿಕೇರಿ, ನ. ೧೭: ಪ್ರಸಕ್ತ ವರ್ಷ ಪುತ್ತರಿ ಹಬ್ಬದ ಕದಿರು ತೆಗೆಯುವ ವಿಚಾರಕ್ಕೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂದೇಶದ ಮೂಲಕ ಗೊಂದಲ ಸೃಷ್ಟಿಯಾಗಿದೆ. ಇದರಿಂದಾಗಿ ಹಬ್ಬಾಚರಣೆ ಮಾಡುವವರಲ್ಲಿ ಭಿನ್ನ ಅಭಿಪ್ರಾಯಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇದರ ಕುರಿತಾಗಿ ಶ್ರೀ ಇಗ್ಗುತಪ್ಪ ದೇವಸ್ಥಾನದ ದೇವತಕ್ಕರಾದ ಪರದಂಡ ಕುಟುಂಬಸ್ಥರು ಸ್ಪಷ್ಟನೆಯೊಂದಿಗೆ ಈ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಈ ಹಿಂದೆ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ‘ಪುತ್ತರಿ’ ಹಬ್ಬದ ಬಗ್ಗೆ ದಿನ ಹಾಗೂ ಮುಹೂರ್ತ ಪಟ್ಟಿ ನಿಶ್ಚಯಗೊಂಡಿದ್ದು. ತಕ್ಕ ಮುಖ್ಯಸ್ಥರು ಹಾಗೂ ಅಮ್ಮಂಗೇರಿ ಜ್ಯೋತಿಷ್ಯರು ಜೊತೆಗೂಡಿ ತಾ. ೧೯ರ ಶುಕ್ರವಾರ ಶ್ರೀ ಇಗ್ಗುತಪ್ಪ ದೇವರ ಕಲಾಡ್ಚ ಹಬ್ಬವೆಂದು ತಾ. ೨೦ರ ಶನಿವಾರ ಪುತ್ತರಿ ಹಬ್ಬವೆಂದೂ ನಿಶ್ಚಯವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ದಿನಾಂಕದ ಬಗ್ಗೆ ಗೊಂದಲವುAಟು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕುರಿತು ಜನತೆಗೆ ಮಾಹಿತಿ ಒದಗಿಸುತ್ತಿರುವದಾಗಿ ಅವರು ತಿಳಿಸಿದ್ದಾರೆ.
ತಾ. ೧೯ರ ಶುಕ್ರವಾರ ಹುಣ್ಣಿಮೆಯಾದರೂ ಸಹ ಆ ದಿವಸ ಚಂದ್ರ ಗ್ರಹಣವಿರುವುದರಿಂದ ಕಣಿಯರು ಪುತ್ತರಿ ಹಬ್ಬವನ್ನು ತಾ. ೨೦ರ ಶನಿವಾರ ರೋಹಿಣಿ ನಕ್ಷತ್ರ ಹಾಗೂ ಮಿಥುನ ಲಗ್ನದಲ್ಲಿ ಆಚರಿಸಲು ಮುಹೂರ್ತ ಪಟ್ಟಿ ನಿಗದಿಪಡಿಸಿದ್ದಾರೆ. ತಾ. ೧೯ ರ ಮಧ್ಯಾಹ್ನ ೧೨.೪೮ ರಿಂದ ಶುರುವಾಗಿ ೪.೧೭ ರವರೆಗೆ ಗ್ರಹಣ ಕಾಲವಾಗಿದೆ. ಗ್ರಹಣ ಸಂದರ್ಭದಲ್ಲಿ ಹರಡುವ ನಕಾರಾತ್ಮಕ ಶಕ್ತಿಗಳು ಧಾನ್ಯ ಲಕ್ಷಿö್ಮಯನ್ನು ಮನೆ ತುಂಬಿಸುವ ಶುಭ ಸಂದರ್ಭಕ್ಕೆ ತಕ್ಕುದಲ್ಲವಾದ್ದರಿಂದ ಮಾರನೇ ದಿನ ಅಂದರೆ ತಾ.೨೦ರ ಸಾಯಂಕಾಲ ಎಂದಿನAತೆ ದೇವಪೊವುದು ಕಳೆದು ಕೊಡಗಿನ ಜನತೆಗೆ ಹಬ್ಬಾಚರಣೆಗೆ ಸಮಯ ನಿಗದಿ ಮಾಡಲಾಗಿದೆ. ರಾತ್ರಿ ೭.೩೫ಕ್ಕೆ ನೆರೆ ಕಟ್ಟುವುದು, ೮.೩೫ ಕದಿರು ತೆಗೆಯುವುದು, ೯.೩೫ ಭೋಜನಕ್ಕೆ ಶುಭವೆಂದು ತಿಳಿಸಲಾಗಿದೆ.
ಕೊಡಗಿನ ಭಕ್ತ ಜನರು ಯಾವುದೇ ಗೊಂದಲಕ್ಕೆ ಒಳಗಾಗದೆ ಶ್ರೀ ಇಗ್ಗುತಪ್ಪ ದೇವಾಲಯದ ಪರಂಪರಾಗತವಾದ, ಶಾಸ್ತೊçÃಕ್ತವಾದ, ಪ್ರಾಚೀನವಾದ
(ಮೊದಲ ಪುಟದಿಂದ) ನಡವಳಿಕೆಯನ್ನು ಮಾನ್ಯ ಮಾಡಿ ತಾ. ೨೦ರಂದು ಪುತ್ತರಿ ಹಬ್ಬವನ್ನು ಆಚರಿಸಬೇಕೆಂದು ದೇವ ತಕ್ಕ ಕುಟುಂಬಸ್ಥರು ವಿನಂತಿಸಿದ್ದಾರೆ.
ತಾ. ೧೯ ರಂದು ಶ್ರೀ ಇಗ್ಗುತಪ್ಪ ದೇವರ ಕಲಾಡ್ಚ ಹಬ್ಬ ಜರುಗಿ ಅಪರಾಹ್ನದ ನಂತರ ದೇವರ ಉತ್ಸವ ಮೂರ್ತಿಯನ್ನು ಎತ್ತು ಪೋರಾಟದೊಂದಿಗೆ ಮಲ್ಮಕ್ಕೆ ಕೊಂಡೊಯ್ದು ಅಲ್ಲಿ ಪಾಡಿ ನಾಡಿನ ತಕ್ಕ ಮುಖ್ಯಸ್ಥರು ನೆಲಜಿ ಪೇರೂರಿನ ತಕ್ಕ ಮುಖ್ಯಸ್ಥರೊಂದಿಗೆ ದೇವಕಟ್ಟನ್ನು ಸಡಿಲಿಸಲಾಗುವುದು. ನಂತರ ಉತ್ಸವ ಸಂಪನ್ನಗೊಳ್ಳುವುದು. ತಾ.೨೦ ರಂದು ಪುತ್ತರಿ ಹಬ್ಬದ ದಿನ ದೇವಸ್ಥಾನದಲ್ಲಿ ನಿಗದಿಯಾದಂತೆ ದೇವಪೋದ್ ಮೊದಲು ಆದ ನಂತರವೇ ನಾಡಿನ ಜನತೆ ಪುತ್ತರಿ ಹಬ್ಬಕ್ಕೆ ಶುರುವಿಟ್ಟುಕೊಳ್ಳುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ, ಕೊಡಗಿನ ಭಕ್ತ ಮಹಾ ಜನರು ಈ ಸಂಸ್ಕೃತಿಗೆ ಗೌರವ ತೋರಿಸಿ ಅನವಶ್ಯಕ ಗೊಂದಲಗಳಿಗೆ ಗಮನ ಹರಿಸದೆ ಈ ಹಿಂದಿನ ಮುಹೂರ್ತ ಪಟ್ಟಿಯನ್ನು ಪಾಲಿಸುವಂತೆ ಅವರು ಕೋರಿದ್ದಾರೆ.
ಪತ್ರಿಕಾಗೋಷ್ಠಿ: ಈ ಬಗ್ಗೆ ಇಗ್ಗುತಪ್ಪ ದೇವತಕ್ಕರಾದ ಪರದಂಡ ಕೆ. ಸುಬ್ರಮಣಿ (ಸುಮನ್), ಸುಬ್ರಮಣಿ (ಮುದ್ದು) ಅವರು ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲೂ ಮಾಹಿತಿ ನೀಡಿದರು. ಈ ಸಂದರ್ಭ ನಾಡುತಕ್ಕರುಗಳಾದ ಕುಟ್ಟಂಜೆಟ್ಟಿರ ಶ್ಯಾಂ ಬೋಪಣ್ಣ, ನಾಟೋಳಂಡ ಕಸ್ತೂರಿ, ಕೇಲೇಟಿರ ರಂಜನ್ ಹಾಜರಿದ್ದರು.
ಇದೇ ವಿಚಾರಕ್ಕೆ ಸಂಬAಧಿಸಿದAತೆ ವೀರಾಜಪೇಟೆಯ ಅಖಿಲ ಕೊಡವ ಸಮಾಜವೂ ಪ್ರತ್ಯೇಕ ಮನವಿ ಮಾಡಿದೆ. ಅಧ್ಯಕ್ಷ ಮಾತಂಡ ಎಂ. ಮೊಣ್ಣಪ್ಪ ಅವರು ಹೇಳಿಕೆ ನೀಡಿದ್ದು, ಈ ಬಾರಿ ಈಗಾಗಲೇ ನಿಗದಿಯಾಗಿರುವಂತೆ ಸಮಯ ಪರಿಪಾಲನೆಯಾಗಲಿ, ಸಂಶಯಗಳಿದ್ದಲ್ಲಿ ಮುಂದಿನ ಬಾರಿಯಿಂದ ಈ ಬಗ್ಗೆ ಮೊದಲೇ ಚರ್ಚಿಸಿ ಇಷ್ಟಾರ್ಥ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ.