ತಾ. ೨೧ ರಂದು ಮಹಾಸಭೆ

ಮಡಿಕೇರಿ, ನ. ೧೮: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿಗೆ ರೂ. ೪೩.೯೨ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಘದ ವ್ಯಾಪ್ತಿಗೆ ೯ ಗ್ರಾಮಗಳು ಸೇರಿದ್ದು, ೨೧೯೦ ಸದಸ್ಯರುಗಳನ್ನು ಹೊಂದಿದ್ದು, ಪಾಲು ಬಂಡವಾಳ ರೂ. ೨೦೯.೫೯ ಲಕ್ಷ ಹೊಂದಿದೆ. ೨೦೨೦-೨೧ನೇ ಸಾಲಿಗೆ ರೂ. ೧೪೩.೮೭ ಕೋಟಿ ವಹಿವಾಟು ನಡೆಸಿರುವ ಸಂಘ ರೂ. ೧೦೭.೧೩ ಲಕ್ಷಗಳ ಕ್ಷೇಮನಿಧಿಯನ್ನು, ರೂ. ೧೮೫.೪೨ ಲಕ್ಷಗಳ ಇತರ ನಿಧಿಯನ್ನು, ರೂ. ೧,೯೧೪.೪೬ ಲಕ್ಷಗಳ ಠೇವಣಿಯನ್ನು ಹೊಂದಿದೆ. ಸಂಘದಿAದ ವಿವಿಧ ರೀತಿಯ ಸಾಲವನ್ನು ಸದಸ್ಯರಿಗೆ ವಿತರಿಸುತ್ತಿದ್ದು, ೨೦೨೦-೨೧ನೇ ಸಾಲಿಗೆ ರೂ. ೯೮೧.೩೬ ಲಕ್ಷಗಳ ಕೆ.ಸಿ.ಸಿ. ಸಾಲವನ್ನು, ರೂ. ೧೬೩.೨೫ ಲಕ್ಷಗಳ ಮಧ್ಯಮಾವಧಿ ಸಾಲವನ್ನು, ರೂ. ೪೨೭.೯೮ ಲಕ್ಷಗಳ ಜಾಮೀನು ಸಾಲವನ್ನು, ರೂ. ೪೪.೩೭ ಲಕ್ಷಗಳ ವಾಹನ ಸಾಲವನ್ನು, ರೂ. ೯೧.೫೭ ಲಕ್ಷಗಳ ಗೃಹ ಸಾಲವನ್ನು, ರೂ. ೨೫೧.೦೧ ಲಕ್ಷಗಳ ಆಭರಣ ಸಾಲವನ್ನು ಸದಸ್ಯರಿಗೆ ವಿತರಿಸಿದೆ. ಅಲ್ಲದೆ ಸಂಘದ ಮೂಲಕ ೧೧೬ ಸ್ವಸಹಾಯ ಸಂಘಗಳನ್ನು ರಚಿಸಿದ್ದು, ರೂ. ೪೬.೧೮ ಲಕ್ಷಗಳ ಠೇವಣಿಯನ್ನು ಸಂಗ್ರಹಿಸಿದ್ದು, ಸಂಘದಿAದ ರೂ. ೧೨೨.೦೦ ಲಕ್ಷಗಳ ಸಾಲ ನೀಡಲಾಗಿದೆ. ಈ ಎಲ್ಲಾ ಸಾಲಗಳನ್ನು ಸಂಘದ ಸ್ವಂತ ಬಂಡವಾಳದಿAದ ವಿತರಿಸಲಾಗುತ್ತಿದ್ದು, ೨೦೨೦-೨೧ನೇ ಸಾಲಿಗೆ ಸದಸ್ಯರಿಂದ ಶೇ. ೯೯ ರಷ್ಟು ಸಾಲ ವಸೂಲಿಯಾಗಿರುವುದಾಗಿ ಅವರು ವಿವರಿಸಿದ್ದಾರೆ.

ಸಂಘವು ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮದಲ್ಲಿ ದಿನಸಿ ಶಾಖೆಗಳನ್ನು ಹೊಂದಿದ್ದು, ಶಾಖೆಗಳ ಮೂಲಕ ರಸಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ವಸ್ತುಗಳು, ಹತ್ಯಾರು, ಸಿಮೆಂಟ್, ಕೊಂಕಣ್ ಗ್ಯಾಸ್, ನಿಯಂತ್ರಿತ ವಸ್ತುಗಳು ಹಾಗೂ ಮದ್ದುಗುಂಡುಗಳನ್ನು ಮಾರಾಟ ಮಾಡುತ್ತಿದ್ದು, ೨೦೨೦-೨೧ನೇ ಸಾಲಿಗೆ ರೂ. ೬೭೬.೫೭ ಲಕ್ಷಗಳ ವ್ಯಾಪಾರ ವಹಿವಾಟು ನಡೆಸಿ ರೂ. ೩೨.೭೧ ಲಕ್ಷಗಳ ಲಾಭಗಳಿಸಿದೆ. ಅಲ್ಲದೆ ಬ್ಯಾಂಕ್‌ನ ೩ ಶಾಖೆಗಳಲ್ಲಿ ಬ್ಯಾಂಕಿAಗ್ ವ್ಯವಹಾರವನ್ನು ನಡೆಸಲಾಗುತ್ತಿದೆ. ವಾಲ್ನೂರು ಶಾಖೆಯಲ್ಲಿ ಸಹಕಾರ ಸಭಾಂಗಣವನ್ನು ನಿರ್ಮಿಸಿದ್ದು, ಸದಸ್ಯರಿಗೆ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡುತ್ತಿದ್ದೇವೆ. ಬ್ಯಾಂಕ್‌ನಲ್ಲಿ ೨ ಟ್ರಾö್ಯಕ್ಟರ್ ಮತ್ತು ೧ ಲಾರಿಯನ್ನು ಹೊಂದಿದ್ದು, ರೈತ ಸದಸ್ಯರುಗಳಿಗೆ ಉಳುಮೆ, ಕೃಷಿ ಕೆಲಸ ಮತ್ತು ಸಾಗಾಣಿಕೆಗೆ ರಿಯಾಯಿತಿ ದರದಲ್ಲಿ ಕಳುಹಿಸಲಾಗುತ್ತಿದೆ. ಸಂಘದ ವತಿಯಿಂದ ೨ ರೈತ ಕೂಟಗಳನ್ನು ಮತ್ತು ೨ ಜಂಟಿ ಭಾದ್ಯತಾ ಗುಂಪುಗಳನ್ನು ರಚಿಸಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ವರ್ಷವೂ ಸಂಘದ ವ್ಯಾಪ್ತಿಯ ೧೦ನೇ ಮತ್ತು ೭ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಯೊಂದು ಶಾಲೆಯ ೩ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ೬ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುತ್ತಿದೆ.

ಸಂಘದ ಸದಸ್ಯ ರೈತರಿಗೆ ಅನುಕೂಲವಾಗುವಂತೆ ನೂತನವಾಗಿ ಈಗ ಇರುವ ಕೇಂದ್ರ ಕಚೇರಿಯ ಪಕ್ಕದಲ್ಲಿ ಗೋದಾಮುಗಳು, ಮಳಿಗೆಗಳು ಹಾಗೂ ಕಚೇರಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಕಾಮಗಾರಿಯು ಪ್ರಗತಿಯಲ್ಲಿದೆ.

ಸಂಘದ ಗುಡ್ಡೆಹೊಸೂರು ಶಾಖೆಯಲ್ಲಿ ಸ್ವದೇಶಿ ಉತ್ಪನ್ನದ ಮೋದಿ ಕೇರ್ ವಸ್ತುಗಳ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಕೇಂದ್ರ ಕಚೇರಿಯಲ್ಲಿ ಸದಸ್ಯರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಇ ಸ್ಟಾಂಪಿAಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ಕ್ರಮ ವಹಿಸಲಾಗಿದೆ.

೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೨೧ ರಂದು ನಡೆಯಲಿದ್ದು, ಸದಸ್ಯರ ಪಾಲು ಹಣದ ಮೇಲೆ ಶೇ. ೧೨ ರ ಡಿವಿಡೆಂಡ್ ಮಹಾಸಭೆಯ ಒಪ್ಪಿಗೆ ಪಡೆದು ನೀಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಬಿ.ಸಿ. ಮಾದಯ್ಯ, ಉಪಾಧ್ಯಕ್ಷ ಬಿ.ಎಸ್. ಧನಪಾಲ ಮತ್ತು ನಿರ್ದೇಶಕರು ಹಾಜರಿದ್ದರು.