*ಸಿದ್ದಾಪುರ, ನ. ೧೮: ನೆಲ್ಲಿಹುದಿಕೇರಿ ಕುಂಬಾರಗುAಡಿ ಭಾಗದಲ್ಲಿ ನಡೆದ ಕರಕುಶಲ ತರಬೇತಿ ಶಿಬಿರದ ಸಮಾರೋಪ ಸಮಾ ರಂಭ ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ನಡೆಯಿತು.
ಕೊಡಗು ಕರಕುಶಲ ಕರ್ಮಿ ಸಂಘದ ಅಧ್ಯಕ್ಷ ರಮೇಶ್ ಬೊಟ್ಟುಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಕರಕುಶಲ ಸೇವಾ ಸಮಿತಿಯ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್, ಕೆಎಸ್‌ಹೆಚ್‌ಡಿಸಿಎಲ್ ವ್ಯವಸ್ಥಾಪಕ ಪುಟ್ಟಸ್ವಾಮಿ, ಉಪಾಧ್ಯಕ್ಷ ಚಂದ್ರ, ಕಾರ್ಯದರ್ಶಿ ಕೆ.ಯು. ಶ್ರೀನಿವಾಸ್, ಸಹ ಕಾರ್ಯದರ್ಶಿ ಸಂತೋಷ್, ಹಿರಿಯರಾದ ಗೋಪಾಲಕೃಷ್ಣ, ಟಿ.ಎಂ. ರವಿ, ರವಿ ಮಾಲ್ದಾರೆ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು ೨೦ಕ್ಕೂ ಹೆಚ್ಚು ಮಂದಿ ೨ ತಿಂಗಳ ಕಾಲ ನಡೆದ ಶಿಬಿರದ ಲಾಭ ಪಡೆದುಕೊಂಡರು. ಸಮಾರೋಪದಲ್ಲಿ ರಮೇಶ್ ಬೊಟ್ಟುಮನೆ ಅವರನ್ನು ಸನ್ಮಾನಿಸಲಾಯಿತು.