ಮಡಿಕೇರಿ, ನ. ೧೮: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಅರಪಟ್ಟು ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು. ಕೊಡವ ಜನಾಂಗಕ್ಕೆ ದೊರಬೇಕಾಗಿರುವ ಬುಡಕಟ್ಟು ಸ್ಥಾನಮಾನ, ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸುವ ವಿಷಯಗಳ ಕುರಿತು ಗ್ರಾಮದ ಕೋಡಿರ ಐನ್‌ಮನೆಯಲ್ಲಿ ಸಂಘಟನೆಯ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಅವರು ಸವಿಸ್ತಾರವಾದ ಮಾಹಿತಿ ಒದಗಿಸಿದರು.

ಸಭಾಧ್ಯಕ್ಷತೆಯನ್ನು ್ಲ ಕೋಡಿರ ಪ್ರವೀಣ್ ವಹಿಸಿದ್ದರು. ವೇದಿಕೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪಾರ್ವತಿ ನಾಚಪ್ಪ, ಚಂಬAಡ ಜನತ್, ಬೇಪಡಿಯಂಡ ದಿನು ಹಾಜರಿದ್ದರು. ಸುಮಾರು ೩೦ ಕ್ಕೂ ಹೆಚ್ಚು ಕೋಡಿರ ಕುಟುಂಬದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿ.ಎನ್.ಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಕೋಡಿರ ಇಂದಿರಾ ಕಾಳಪ್ಪ ಪ್ರಾರ್ಥಿಸಿ, ಕೋಡಿರ ವಿನೋದ್ ಸ್ವಾಗತಿಸಿ, ಕೋಡಿರ ವಿಠಲ್ ಕಾಳಪ್ಪ ವಂದಿಸಿದರು.