ನಾಪೋಕ್ಲು, ನ. ೧೮: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೦-೨೧ನೇ ಸಾಲಿನಲ್ಲಿ ರೂ. ೨೦ ಲಕ್ಷದ ೬೮ ಸಾವಿರದ ೪೯೫ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ. ರಘು ತಮ್ಮಯ್ಯ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂಘದಲ್ಲಿ ಪ್ರಸಕ್ತ ೧೯೯೦ ಸದಸ್ಯರಿದ್ದಾರೆ. ಸಂಘವು ರೂ. ೮೧,೮೫,೯೭೪ ಪಾಲು ಬಂಡವಾಳವನ್ನು ಹೊಂದಿದೆ. ಸಂಘದ ಠೇವಣಿ ೩,೬೦,೨೨,೩೧೧ ರೂಪಾಯಿಗಳಾಗಿರುತ್ತದೆ. ಸಂಘದ ಸದಸ್ಯರಿಗೆ ರೂ. ೫,೮೧,೦೯,೧೭೫ ಕೆ.ಸಿ.ಸಿ ಸಾಲವನ್ನು ನೀಡಿದ್ದು, ಶೇ. ೧೦೦ ಮರುಪಾವತಿಯಾಗಿದೆ ಎಂದು ತಿಳಿಸಿದರು. ಸಂಘವು ರೂ. ೧೧,೯೯,೩೮,೪೮೮ ದುಡಿಯುವ ಬಂಡವಾಳವನ್ನು ಹೊಂದಿದೆ. ಇದರಿಂದ ಸದಸ್ಯರಿಗೆ ಈ ಬಾರಿ ಶೇ. ೧೧ ಡಿವಿಡೆಂಡ್ ವಿತರಿಸಲು ನಿರ್ಧರಿಸಲಾಗಿದೆ ಎಂದರು. ಸಂಘವು ಒಟ್ಟು ರೂ. ೨,೨೦,೯೩,೯೧೭ ಧನ ವಿನಿಯೋಗಿಸಿದ್ದು, ಕೆ.ಡಿ.ಸಿ.ಸಿ. ಬ್ಯಾಂಕಿನಲ್ಲಿ ಪಾಲು ಹಣವಾಗಿ ರೂ. ೩೧,೩೦,೦೦೦ ಹಾಗೂ ರೂ. ೪೧,೯೬,೯೫೩ ಕ್ಷೇಮ ನಿಧಿಯಾಗಿ ಹಾಗೂ ರೂ. ೧,೪೦,೩೬,೪೭೮ ಕೋಟಿ ನಿರಖು ಠೇವಣಿಯಾಗಿ ವಿನಿಯೋಗಿಸಿ ರುತ್ತೇವೆ ಎಂದು ಹೇಳಿದರು.

ಸಂಘವು ಎರಡು ಗೊಬ್ಬರ ಗೋದಾಮನ್ನು ಹೊಂದಿದ್ದು, ಸದಸ್ಯರಿಗೆ ಬೇಕಾದ ಗೊಬ್ಬರ ಕ್ರಿಮಿನಾಶಕ, ಕೃಷಿ ಉಪಕರಣ, ಪಡಿತರ, ಮೋದಿಕೇರ್ ದಿನಬಳಕೆಯ ವಸ್ತುಗಳನ್ನು ವಿತರಿಸುತ್ತಿದೆ. ಸದಸ್ಯರಿಗೆ ಕೆ.ಸಿ.ಸಿ. ಸಾಲ, ಜಾಮೀನು ಸಾಲ, ಗೊಬ್ಬರ ಸಾಲ, ಚಿನ್ನಾಭರಣ ಅಡವು ಸಾಲ, ನಿರಖು ಠೇವಣಿ ಸಾಲ ನೀಡುತ್ತದೆ. ಸೇಫ್ ಲಾಕರ್ ವ್ಯವಸ್ಥೆ ನೀಡಲಾಗುತ್ತಿದೆ ಎಂದರು. ವಾರ್ಷಿಕ ಮಹಾಸಭೆ ತಾ. ೨೩ ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದ್ದು, ಎಲ್ಲಾ ಸದಸ್ಯರು ಕೋವಿಡ್ ನಿಯಮ ಪಾಲಿಸಿ ಹಾಜರಾಗಬೇಕಾಗಿ ವಿನಂತಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಡಕಡ ಎಂ. ಬೆಳ್ಯಪ್ಪ, ನಿರ್ದೇಶಕರಾದ ಅಲ್ಲಾರಂಡ ಅಯ್ಯಪ್ಪ, ಕಲ್ಯಾಟಂಡ ಎಂ. ಬೋಪಣ್ಣ, ನಿಡುಮಂಡ ಸಿ. ಪೂವಯ್ಯ, ಕೋಡಿಮಣಿಯಂಡ ಎಂ. ನಾಣಯ್ಯ, ಪರದಂಡ ಪಿ. ಪ್ರಮೀಳ, ನಂಬಡಮAಡ ಬಿ. ಸುನಿತ, ಎ.ಎನ್. ಲಕ್ಷö್ಮಣ, ಕೋಲೆಯಂಡ ಎ. ಅಶೋಕ, ಪಾಲೆಯರ ಟಿ. ಕಾರ್ಯಪ್ಪ, ಕುಡಿಯರ ಕೆ. ಗಿರೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಮಂಜುಳಾ ಇದ್ದರು.