ಮಡಿಕೇರಿ, ನ. ೧೬: ಮಡಿಕೇರಿಯಲ್ಲಿರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯು ಲಾಭದ ಹಾದಿಯಲ್ಲಿದೆ. ಈ ಸಂಸ್ಥೆಯ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಮುಂಡುವAಡ ಪಿ. ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಧ್ಯಕ್ಷರು, ಸಹಕಾರಿಯ ಆಡಳಿತ ವ್ಯವಹಾರವು ರೂ. ೧೦೮೬.೫೦ ಲಕ್ಷವಿದ್ದು, ದುಡಿಯುವ ಬಂಡವಾಳವು ರೂ. ೫೫೩.೪೮ ಲಕ್ಷಗಳಿರುವುದಾಗಿಯೂ, ವರದಿ ಸಾಲಿನಲ್ಲಿ ಸಹಕಾರಿಯು ರೂ. ೨೨.೨೮ ಲಕ್ಷ ಲಾಭಗಳಿಸಿರುವುದಾಗಿ ತಿಳಿಸಿದರು.

ಸಹಕಾರಿಯು ಗಳಿಸಿದ ಲಾಭದಲ್ಲಿ ಸದಸ್ಯರಿಗೆ ಶೇ. ೧೦ ಡಿವಿಡೆಂಡನ್ನು ಹಂಚಿದ್ದು, ಸದಸ್ಯರು ಅಥವಾ ಅವರ ಮಕ್ಕಳ ಸಾಧನೆಗೆ, ೧೦ನೇ ತರಗತಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗೆ, ಪ್ರೋತ್ಸಾಹಕ ನಗದು ಬಹುಮಾನ ನೀಡಲಾಗುತ್ತಿದೆ. ಹಾಗೆಯೇ ಅನಾರೋಗ್ಯ ನಿಮಿತ್ತ ವೈದ್ಯಕೀಯ ವೆಚ್ಚವನ್ನು ಭರಿಸಲು ಶಕ್ತರಲ್ಲದವರಿಗೆ ಧನ ಸಹಾಯ ನೀಡುತ್ತಿದ್ದೇವೆ. (ಸಂಬAಧಿಸಿದ ಸೂಕ್ತ ದಾಖಲೆಗಳೊಂದಿಗೆ). ಸಹಕಾರಿಯ ಮುಖಾಂತರ ಜಾಮೀನು ಸಾಲ, ಗೃಹ ನಿರ್ಮಾಣ ಸಾಲ, ಆಭರಣ ಸಾಲ, ಠೇವಣಿಗಳ ಮೇಲಿನ ಸಾಲಗಳನ್ನು ಸದಸ್ಯರುಗಳ ಅವಶ್ಯಕತೆಗನುಗುಣವಾಗಿ ವಿತರಿಸಲಾಗುತ್ತಿದೆ.

ಸಹಕಾರಿಯಲ್ಲಿ ಆರ್.ಟಿ.ಸಿ. ಇ-ಸ್ಟಾö್ಯಂಪಿAಗ್ ಹಾಗೂ ಜೆರಾಕ್ಸ್ ಮಾಡಿಕೊಡುವ ಸೌಲಭ್ಯವನ್ನು ಅಳವಡಿಸಲಾಗಿದೆ. ಸಹಕಾರಿಯ ಉತ್ತಮ ಕಾರ್ಯನಿರ್ವಹಣೆಗಾಗಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ ಇವರುಗಳ ವಾರ್ಷಿಕ ಮಹಾಸಭೆಯಲ್ಲಿ ೪ ವರ್ಷ ಸತತವಾಗಿ ಪ್ರಥಮ ಬಹುಮಾನ ಪಡೆದುಕೊಂಡಿರುತ್ತೇವೆ ಎಂದು ತಿಳಿಸಿದರು.

ಸರ್ವ ಸದಸ್ಯರ, ಆಡಳಿತ ಮಂಡಳಿಯವರ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಸಹಕಾರಿಯು ಅಭಿವೃದ್ಧಿ ಹೊಂದುತ್ತಿರುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತ್ಯದ ಅಧಿಕಾರಿಗಳು ಹಾಗೂ ಸಹಕಾರಿಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.