ಪೊನ್ನಂಪೇಟೆ, ನ. ೧೬: ಮಕ್ಕಳು ಮನುಕುಲಕ್ಕೆ ದೇವರು ಕೊಟ್ಟ ದೊಡ್ಡ ಕೊಡುಗೆ. ಮಕ್ಕಳು ದೈಹಿಕವಾಗಿ ಮತ್ತು ಜ್ಞಾನದಲ್ಲಿ ಶಕ್ತಿವಂತರಾದರೆ ಮಾತ್ರ, ಅಂತಹ ಮಕ್ಕಳಿಂದ ರಾಷ್ಟçದ ಭವಿಷ್ಯ ಬಲಿಷ್ಠವಾಗಲು ಸಾಧ್ಯ ಎಂದು ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶ ಗಿರೀಗೌಡ ಅಭಿಪ್ರಾಯಪಟ್ಟರು.

ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಪೊನ್ನಂಪೇಟೆ ವಕೀಲರ ಸಂಘದ ವತಿಯಿಂದ ಅಜಾದಿ ಕೀ ಅಮೃತ ಮಹೋತ್ಸವ ಅಂಗವಾಗಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ನ್ಯಾಯ ನಿಮ್ಮದು ನೆರವು ನಮ್ಮದು’ ಎಂಬ ಕಾರ್ಯಕ್ರಮದಲ್ಲಿ ಪಾನ್ ಇಂಡಿಯಾ ಕಾನೂನು ಅರಿವು ಮತ್ತು ಪ್ರಚಾರ ಅಭಿಯಾನದಡಿಯಲ್ಲಿ ‘ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹ ’ ವಿಷಯದ ಬಗ್ಗೆ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ಹಂತದಲ್ಲೂ ಪ್ರತಿ ಯೊಬ್ಬರಿಗೂ ಕಾನೂನು ಅನ್ವಯ ವಾಗುತ್ತದೆ. ಕಾನೂನು ತಿಳಿಯದೆ ತಪ್ಪು ಮಾಡಿ, ಕಾನೂನು ನನಗೆ ಗೊತ್ತಿರಲಿಲ್ಲ ಎಂದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾರೇ ಆದರೂ ಕಾನೂನಿನ ವಿರುದ್ಧ ನಡೆದುಕೊಂಡರೆ ಶಿಕ್ಷೆ ಖಂಡಿತ ಆಗುತ್ತದೆ. ಯಾರು ಕಾನೂನಿಗೆ ತಲೆಬಾಗುತ್ತಾರೆ ಅಂತವರಿಗೆ ಕಾನೂನಿನ ರಕ್ಷಣೆ ಇರುತ್ತದೆ. ಮಕ್ಕಳು ಬದುಕಿನಲ್ಲಿ ಉತ್ತಮ ಹವ್ಯಾಸಗಳನ್ನು ಅಳವಡಿಸಿ ಕೊಂಡು ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದಾಗಿ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯವಾಗುತ್ತದೆ. ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಉಚಿತ ಕಾನೂನು ನೆರವು ನೀಡಲಾಗುವುದು. ಮಕ್ಕಳಿಗೆ ಎಳೆ ವಯಸ್ಸಿನಲ್ಲಿ ಸಂಸ್ಕಾರಗಳನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದರು.

‘ಬಾಲ್ಯ ವಿವಾಹ’ ಪಿಡುಗಿನ ಬಗ್ಗೆ ಮಾತನಾಡಿದ ವಕೀಲ ದರ್ಶನ್, ಪ್ರತಿಯೊಂದು ಹಂತದಲ್ಲೂ ಪ್ರತಿ ಯೊಬ್ಬರಿಗೂ ಕಾನೂನು ಅನ್ವಯ ವಾಗುತ್ತದೆ. ಕಾನೂನು ತಿಳಿಯದೆ ತಪ್ಪು ಮಾಡಿ, ಕಾನೂನು ನನಗೆ ಗೊತ್ತಿರಲಿಲ್ಲ ಎಂದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾರೇ ಆದರೂ ಕಾನೂನಿನ ವಿರುದ್ಧ ನಡೆದುಕೊಂಡರೆ ಶಿಕ್ಷೆ ಖಂಡಿತ ಆಗುತ್ತದೆ. ಯಾರು ಕಾನೂನಿಗೆ ತಲೆಬಾಗುತ್ತಾರೆ ಅಂತವರಿಗೆ ಕಾನೂನಿನ ರಕ್ಷಣೆ ಇರುತ್ತದೆ. ಮಕ್ಕಳು ಬದುಕಿನಲ್ಲಿ ಉತ್ತಮ ಹವ್ಯಾಸಗಳನ್ನು ಅಳವಡಿಸಿ ಕೊಂಡು ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದಾಗಿ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯವಾಗುತ್ತದೆ. ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಉಚಿತ ಕಾನೂನು ನೆರವು ನೀಡಲಾಗುವುದು. ಮಕ್ಕಳಿಗೆ ಎಳೆ ವಯಸ್ಸಿನಲ್ಲಿ ಸಂಸ್ಕಾರಗಳನ್ನು ಕಲಿಸುವುದು ಪೋಷಕರ ಜವಾಬ್ದಾರಿ ಎಂದರು.

‘ಬಾಲ್ಯ ವಿವಾಹ’ ಪಿಡುಗಿನ ಬಗ್ಗೆ ಮಾತನಾಡಿದ ವಕೀಲ ದರ್ಶನ್, ಪ್ರತಿಯೊಂದು ಮಗುವೂ ತನ್ನದೇ ಆದ ಹಕ್ಕುಗಳನ್ನು ಹೊಂದಿದ್ದು, ಅವುಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು.

ವೀರಾಜಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿ ರಾಜೇಶ್ ‘ಮಕ್ಕಳ ಹಕ್ಕುಗಳು ಮತ್ತು ಬಾಲ್ಯ ವಿವಾಹ’ದ ಬಗ್ಗೆ ಜಾಗೃತಿ ಗೀತೆಯನ್ನು ಹಾಡಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳೊಂದಿಗೆ ಪಟ್ಟಣದಲ್ಲಿ ಜಾಥಾ ನಡೆಸುವ ಮೂಲಕ ಮಕ್ಕಳ ಹಕ್ಕುಗಳು ಹಾಗೂ ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ಧಿಕಾರಿ ಡಿ. ಕುಮಾರ್, ಸಿಡಿಪಿಓ ರಾಜೇಶ್, ಮುಖ್ಯ ಶಿಕ್ಷಕ ಬಿ.ಎಂ. ವಿಜಯ್, ಸಿಆರ್‌ಪಿ ತಿರುನೆಲ್ಲಿಮಾಡ ಜೀವನ್, ಎಸ್‌ಡಿಎಂಸಿ ಅಧ್ಯಕ್ಷ ರಘುನಾಥ್, ಸದಸ್ಯ ಮುರುಳಿ, ಶಿಕ್ಷಕರಾದ ಮಹೇಶ್, ಫಿಲೋಮಿನ, ಜಾನ್ಸಿ, ರೋಸಿ, ಗಂಗಮ್ಮ, ಮಂಗಳ, ನಿಂಗರಾಜ್, ಶಕೀಲಾಭಾನು, ಗಂಗಾಮಣಿ, ವಿನಿತಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ದೈಹಿಕ ಶಿಕ್ಷಕ ಮಹೇಶ್ ಸ್ವಾಗತಿಸಿ, ನಿರೂಪಿಸಿದರು. ತಿರುನೆಲ್ಲಿಮಾಡ ಜೀವನ್ ವಂದಿಸಿದರು.