ಸೋಮವಾರಪೇಟೆ, ನ. ೧೬: ಕುಶಾಲನಗರ-ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ಯಡವನಾಡು ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಬಣ್ಣ ಬಳಿಯುವ ಮೂಲಕ ನಿಲ್ದಾಣಕ್ಕೆ ಮೆರುಗು ನೀಡಲಾಯಿತು.

ಸೋಮವಾರಪೇಟೆ ಕಾಫಿ ಮಂಡಳಿಯ ಸಹಯೋಗದೊಂದಿಗೆ ನಿಲ್ದಾಣದ ಸುತ್ತಲೂ ಶ್ರಮದಾನದ ಮೂಲಕ ಶುಚಿತ್ವಗೊಳಿಸಿ, ಅನೇಕ ದಶಕಗಳಿಂದಲೂ ಸುಣ್ಣ ಬಣ್ಣ ಕಾಣದೇ ಇದ್ದ ನಿಲ್ದಾಣಕ್ಕೆ ಆಕರ್ಷಕ ಬಣ್ಣ ಬಳಿಯುವ ಮೂಲಕ ಹೊಸತನ ನೀಡಲಾಯಿತು.

ಈ ಬಸ್ ನಿಲ್ದಾಣದಲ್ಲಿ ದಿನಂಪ್ರತಿ ನೂರಾರು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್‌ಗಳಿಗೆ ಕಾಯುತ್ತಿದ್ದು, ಈ ಹಿಂದೆ ಬಳಿದಿದ್ದ ಬಣ್ಣವು ಮಾಸಿದ್ದರಿಂದ ನಮ್ಮ ಸಂಘಟನೆಯ ಮೂಲಕ ಕಾಫಿ ಮಂಡಳಿ ಸಹಯೋಗದೊಂದಿಗೆ ಹೊಸತನ ನೀಡಲಾಗಿದೆ. ಆ ಮೂಲಕ ಸ್ವಚ್ಛ ಭಾರತದ ಸಂಕಲ್ಪಕ್ಕೆ ಕೈ ಜೋಡಿಸಲಾಗಿದೆ. ಯುವ ಜನಾಂಗ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂಬ ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯಿಫಾ ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದರು.

ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳಾದ ಸಜನ್ ಮಂದಣ್ಣ, ಮೋಹಿತ್ ತಿಮ್ಮಯ್ಯ, ಹರ್ಷಿತ್ ಶಿವಪ್ಪ, ಆದರ್ಶ ತಮ್ಮಯ್ಯ, ವಿನಯ್ ಕುಶಾಲಪ್ಪ, ಸ್ವಾಗತ್ ಕುಶಾಲಪ್ಪ, ಪ್ರದೀಪ್, ವಿಕಾಸ್, ಕೆ.ವಿ. ಶರತ್, ಸಮರ್ಥ್, ಜೀವನ್, ಚಿರಂಜೀವಿ, ಕಾಫಿ ಬೋರ್ಡ್ ಅಧಿಕಾರಿಗಳಾದ ಲಕ್ಷಿö್ಮÃಕಾಂತ್, ವಿಶ್ವನಾಥ್, ಪ್ರಶಾಂತ್ ಅವರುಗಳು ಭಾಗವಹಿಸಿದ್ದರು.