ಕೂಡಿಗೆ, ನ. ೧೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವಣ್ಣ ದೇವಸ್ಥಾನದ ಉದ್ಘಾಟನೆ ತಾ. ೨೨ ರಂದು ನಡೆಯಲಿದೆ.
ಹುಣಸೂರು ತಾಲೂಕಿನ ಗೌಡಗೆರೆ ಶ್ರೀ ಗುರು ಜಂಗಮದೇವರ ಮಠದ ನಟರಾಜಸ್ವಾಮಿ ಸಾನಿಧ್ಯ ವಹಿಸಲಿದ್ದಾರೆ. ಅಂದು ಬೆಳಿಗ್ಗೆ ೬ ಗಂಟೆಗೆ ಕಾವೇರಿ ನದಿಯಿಂದ ಬೆಳ್ಳಿ ರಥದ ಮೆರವಣಿಗೆಯಲ್ಲಿ ಕಳಶ ತರುವುದು, ನಂತರ ಮಹಾಗಣಪತಿ ಹೋಮ, ರುದ್ರಹೋಮ, ಮಹಾರುದ್ರಾಭಿಷೇಕ, ಅಷ್ಪೋತ್ತರ ತೀರ್ಥ- ಪ್ರಸಾದ, ಸಭಾ ಕಾರ್ಯಕ್ರಮ, ಅಶೀರ್ವಚನ, ಮಹಾಮಂಗಳಾರತಿ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ ಸಿ ನಂಜುAಡ ಸ್ವಾಮಿ ತಿಳಿಸಿದ್ದಾರೆ.