ಮಡಿಕೇರಿ, ನ. ೧೬: ಮಲ್ಲಿಕಾರ್ಜುನ ನಗರದಲ್ಲಿರುವ ಶ್ರೀ ಕೋದಂಡರಾಮ ದೇವಾಲಯಕ್ಕೆ ಇಂದು ಮುಳಿಯ ಜ್ಯುವೆಲ್ಲರ್ಸ್ನ ಮಾಲೀಕರಾದ ಕೇಶವ ಪ್ರಸಾದ್ ಮುಳಿಯ ಮತ್ತು ಕೃಷ್ಣಪ್ರಸಾದ್ಮುಳಿಯ ಸಹೋದರರು ಸುಮಾರು ೫೫ಸಾವಿರ ಬೆಲೆಬಾಳುವ ಬೆಳ್ಳಿಯ ನಂದಾ ದೀಪವನ್ನು ಅರ್ಪಣೆ ಮಾಡಿದರು.
ಈ ಹಿಂದೆ ಕೋದಂಡರಾಮ ದೇವರ ಸನ್ನಿಧಿಯಲ್ಲಿ ತಮ್ಮ ಕಾರ್ಯ ಕೈಗೂಡಬೇಕೆಂದು ಸಂಕಲ್ಪಿಸಿಕೊAಡು ಪ್ರಾರ್ಥನೆ ಸಲ್ಲಿಸಿ ಅದು ಇಂದು ಫಲಿಸಿದ್ದು, ಅದಕ್ಕಾಗಿ ಬೆಳ್ಳಿಯ ದೀಪವನ್ನು ಅರ್ಪಿಸಿರುವುದಾಗಿದೆ ಎಂದು ತಿಳಿಸಿದ್ದಾರೆ. ದೇವಾಲಯದ ಅಭಿವೃದ್ಧಿ ಕಾರ್ಯ ಶೀಘ್ರದಲ್ಲಿ ಮುಕ್ತಾಯಗೊಳ್ಳಲಿ ಹಾಗೂ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣವನ್ನು ನೀಡುವಂತಾಗಬೇಕೆAದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ ಹಾಜರಿದ್ದರು. ದೇವಾಲಯದ ಪದಾಧಿಕಾರಿಗಳಾದ ಸಂಪತ್ ಕುಮಾರ್, ಮಂಜುನಾಥ್, ತಿಮ್ಮಯ್ಯ, ನಂಜುAಡ, ಗೋಪಿನಾಥ್, ಪರಮೇಶ್, ಕುಶಲ, ಸೋಮಶೇಖರ್ ವಿಶ್ವನಾಥ್, ಕಾಳಪ್ಪ ಶಿವಪ್ಪ ಮೊದಲಾದವರು ಇದ್ದರು.