ವೀರಾಜಪೇಟೆ, ನ. ೧೫: ರಾಜ್ಯ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಮಡಿಕೇರಿ ಹಾಗೂ ವೀರಾಜಪೇಟೆ ನಡುವಿನ ೬೬ ಕೆ.ವಿ ಮಾರ್ಗಕ್ಕೆ ರೈತರ ಜಮೀನು ಬಳಕೆ ಹಾಗೂ ಪರಿಹಾರ ನೀಡುವ ಸಭೆಗೆ ರೈತರು ತೀವ್ರ ವಿರೋಧ ವ್ಯಕ್ತ ಪಡಿಸಿ ಸಭೆಯನ್ನು ಬಹಿಷ್ಕರಿಸಿದರು.

ವೀರಾಜಪೇಟೆ ಪುರಭವನದಲ್ಲಿ ಜಿಲ್ಲಾಧಿಕಾರಿ ಬಿ.ಎಸ್ ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ಕಡಗದಾಳು ಗ್ರಾಮದ ವೀರಾಜಪೇಟೆ, ನ. ೧೫: ರಾಜ್ಯ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಮಡಿಕೇರಿ ಹಾಗೂ ವೀರಾಜಪೇಟೆ ನಡುವಿನ ೬೬ ಕೆ.ವಿ ಮಾರ್ಗಕ್ಕೆ ರೈತರ ಜಮೀನು ಬಳಕೆ ಹಾಗೂ ಪರಿಹಾರ ನೀಡುವ ಸಭೆಗೆ ರೈತರು ತೀವ್ರ ವಿರೋಧ ವ್ಯಕ್ತ ಪಡಿಸಿ ಸಭೆಯನ್ನು ಬಹಿಷ್ಕರಿಸಿದರು.

ವೀರಾಜಪೇಟೆ ಪುರಭವನದಲ್ಲಿ ಜಿಲ್ಲಾಧಿಕಾರಿ ಬಿ.ಎಸ್ ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಡಿಕೇರಿ ಕಡಗದಾಳು ಗ್ರಾಮದ ಪಂಚಾಯಿತಿ ಮಟ್ಟದಲ್ಲಿ ರೈತರ ಸಭೆ ಕರೆದು ಅವರ ಅಭಿಪ್ರಾಯವನ್ನು ಪಡೆಯಬೇಕಿತ್ತು. ಭೂಮಿ ನೀಡಬೇಕಾದ ರೈತರಿಗೆ ನೋಟೀಸ್ ಹಾಗೂ ಯಾವುದೇ ತಿಳುವಳಿಕೆ ನೀಡಿಲ್ಲ. ರೈತರನ್ನು ಪರಿಹಾರ ನಿಗದಿಗೆ ಏಕಾಏಕಿ ಸಭೆ ಕರೆದಿರುವುದು ಸಮಂಜಸವಲ್ಲ. ನಿಮ್ಮ ಪತ್ರದ ಪ್ರಕಾರ ರೈತರ ಭೂಮಿ ಎಂದರೆ ಸರಕಾರಿ ಭೂಮಿ ಎನ್ನುವಂತಿದೆ. ರೈತರು ಎಷ್ಟು ಭೂಮಿ ನೀಡಬೇಕು ಎಂಬ ಸರ್ಮಪಕ ಮಾಹಿತಿ ನೀಡಿಲ್ಲ ಆದ್ದರಿಂದ ಈ ಸಭೆ ನಿಯಮ ಬಾಹಿರವಾಗುತ್ತದೆ. ವೈಜ್ಞಾನಿಕವಾದ ಕೆಲಸಕ್ಕೆ ಒತ್ತು ನೀಡಿ ಪರಿಸರ ಉಳಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ರೈತರ ಬೇಕು ಬೇಡಿಕೆಗಳ ಜನಾಭಿಪ್ರಾಯ ಸಂಗ್ರಹಿಸದೆ ರೈತರಿಗೆ ಹೊರೆಯಾಗುವ ಕಾಮಗಾರಿಯನ್ನು ಕ್ಯೆಗೆತ್ತಿಕೊಂಡಿದ್ದೀರ. ಸಣ್ಣ ಹಿಡುವಳಿಯನ್ನೆ

(ಮೊದಲ ಪುಟದಿಂದ) ನಂಬಿರುವ ರೈತರ ಜಮೀನಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸದೆ ಏಕಾಏಕಿ ಜಮೀನಿಗೆ ಪರಿಹಾರ ನಿಗದಿ ಸಭೆ ಕರೆದಿರುವುದು ಹಾಸ್ಯಸ್ಪದ. ಮುಂದಿನ ದಿನಗಳಲ್ಲಿ ಆನೆಚೌಕೂರಿನ ಆನೆ ಕಾರಿಡಾರ್‌ಗೆ ಸಮಸ್ಯೆ ಆಗಬಹುದೆಂದು ಮುಂದಾಲೋಚಿಸಿ ಬಡ ರೈತರ ಜಮೀನಿಗೆ ಕೊಳ್ಳಿ ಇಡುತ್ತಿರುವದು ಖಂಡನೀಯ. ವಿದ್ಯುತ್ ಸಮಸ್ಯೆಗಳಿಗೆ ಹಳೆ ಮಾರ್ಗವನ್ನು ನವೀಕರಿಸಿದರೆ ಸಾಕು. ವಿದ್ಯುತ್ ಸೋರಿಕೆಯನ್ನು ತಡೆಯಬಹುದು. ಕೆಲವು ರೈತರಿಗಿರುವ ಅಂಗೈ ಅಗಲ ಭೂಮಿಯನ್ನು ಕಸಿದುಕೊಂಡು ನೀವು ಪರಿಹಾರ ನೀಡಿದರೆ ಏನು ಪ್ರಯೋಜನ ಈ ಯೋಜನೆಯನ್ನು ಕೈ ಬಿಡಿ ಎಂದು ಆಗ್ರಹಿಸಿದರು.

ಸಭೆಯಲ್ಲಿ ಕಾಂಗ್ರೆಸ್ ರಾಜ್ಯ ಕಿಸಾನ್ ಘಟಕದ ಕಾರ್ಯದರ್ಶಿ ಗೋಪಾಲಕೃಷ್ಣ, ರೈತರಾದ ಮೇಕತಂಡ ರಘು, ಇಟ್ಟಿರ ಜೈನಿ ಕಾರ್ಯಪ್ಪ, ಬೊಳ್ಳಚಂಡ ಪ್ರಕಾಶ್, ಮುಂತಾದವರು ಮಾತನಾಡಿ ವಿದ್ಯುತ್ ಮಾರ್ಗಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರ ನಡೆದರು.

ಮೈಸೂರು ಕೆ.ಪಿ.ಟಿ.ಸಿ.ಎಲ್ ಅಧೀಕ್ಷಕ ಗೋಪಾಲ್ ಗಾಂವ್ಕರ್ ಯೋಜನೆಯ ಉದ್ದೇಶದ ವಿವರ ನೀಡಿ ಈ ಯೋಜನೆಯಲ್ಲಿ ೨೦೦ ರೈತರ ಜಮೀನು (ಎರಡು ಕಡೆ ಸೇರಿ ೧೮ ಮೀ ಅಗಲ) ಅಗತ್ಯ ಬರುತ್ತಿದೆ , ೩೮.೮ ಕಿ ಮೀ ದೂರವಿದ್ದು, ೧೯೯ ಗೋಪುರ ನಿರ್ಮಾಣ ಆಗಲಿದೆ. ಸರಕಾರದ ೨೦೧೩ನೇ ಭೂಸ್ವಾಧೀನ ಅಧಿನಿಯಮ ದಂತೆ ಕನಿಷ್ಟ ೨ ಲಕ್ಷ ರೂ ಪರಿಹಾರ ಇರುತ್ತದೆ ಇದನ್ನು ಜಿಲ್ಲಾಧಿಕಾರಿ ನಿಯಮದಂತೆ ನಿಗದಿಪಡಿಸ ಬಹುದಾಗಿದೆ. ಅಭಿವೃದ್ಧಿ ದೃಷ್ಠಿಯಿಂದ ಮತ್ತು ಕೊಡಗಿನ ಜನರ ಅನೂಕೂಲ ಕ್ಕಾಗಿ ಈ ಯೋಜನೆ ಆಗತ್ಯ ಇದೆ ಎಂದರು.

ಜಿಲ್ಲಾಧಿಕಾರಿ ಬಿ.ಎಸ್. ಸತೀಶ ಮಾತನಾಡಿ ನಾಳೆ ಮಡಿಕೇರಿಯಲ್ಲಿ ನಡೆಯುವ ಸಭೆಯ ಬಳಿಕ ಜನಾಭಿಪ್ರಾಯವನ್ನು ಕ್ರೋಡಿಕರಿಸಿ ನಂತರ ಮುಂದಿನ ಕ್ರಮವನ್ನು ನಿಯಮಾನುಸಾರ ಕೈಗೊಳ್ಳುವುದಾಗಿ ಹೇಳಿದರು. ವೇದಿಕೆಯಲ್ಲಿ ತಹಶೀಲ್ದಾರ್ ಯೋಗಾನಂದ, ಉಪ ವಿಭಾಗಧಿಕಾರಿ ಈಶ್ವರ ಕುಮಾರ್ ಖಂಡು, ಜಿಲ್ಲಾ ಅಪರ ಜಿಲ್ಲಾಧಿಕಾರಿ ರಾಜುಮೊಗವೀರ , ಡಿವೈ.ಎಸ್.ಪಿ ಜಯಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.