ಮಡಿಕೇರಿ, ನ. ೧೫: ಮಡಿಕೇರಿ ನಗರದ ಹಲವು ಕಡೆ ವಾಹನ ಚಾಲಿಸುವದು ಪ್ರಾಣಾಪಾಯವನ್ನು ಆಹ್ವಾನಿಸಿದಂತಾಗುತ್ತಿದೆ. ನಗರದ ಕೊಹಿನೂರು ರಸ್ತೆಯಿಂದ ಕಾಲೇಜು ರಸ್ತೆಗೆ ತಿರುವು ಪಡೆಯುವ ಕಿರಿದಾದ ಏಕಮುಖ ರಸ್ತೆಯಲ್ಲಿ ಯಾವ ನಿರ್ಬಂಧವೂ ಇಲ್ಲದೆ ವಾಹನಗಳು ಎರಡೂ ಮುಖಗಳಲ್ಲಿ ಸಂಚರಿಸುತ್ತಿರುತ್ತವೆ. ಏಕೆಂದರೆ, ನಗರದಲ್ಲಿ ಸಂಚಾರಿ ಪೊಲೀಸರು ಕೆಲವೊಂದು ಸ್ಥಳಗಳಲ್ಲಿ ಕಾಣ ಬರುತ್ತಾರೆಯೇ ಹೊರತು ಈ ರಸ್ತೆಯತ್ತ ತಿರುಗಿಯೂ ನೋಡುವುದಿಲ್ಲ. ಆದರೆ, ನಗರದಲ್ಲಿ ಈ ಕಿರು ರಸ್ತೆಯೇ ಪ್ರಮುಖ ರಸ್ತೆಯಾಗಿ ಸುಲಭ ಸಂಚಾರದ ಮಾರ್ಗವಾಗಿದೆ. ಏಕಮುಖ ಸಂಚಾರದಲ್ಲಿ ಎದುರು ದಿಕ್ಕಿನಿಂದ ವಾಹನಗಳು ಬಂದಾಗ ಸರಿಯಾದ ದಿಕ್ಕಿನಲ್ಲಿ ಸಂಚರಿಸುವ ವಾಹನಗಳು ಪಲ್ಟಿ ಹೊಡೆಯುವ ಭಯವುಂಟಾಗುತ್ತದೆ.
ಈ ನಡುವೆ ನಗರಸಭೆಯ ಸಂಬAಧಿತ ಸಿಬ್ಬಂದಿ, ಅಧಿಕಾರಿಗಳು, ಸದಸ್ರ‍್ಯಾರೂ ಇತ್ತ ತಲೆ ಹಾಕಿದಂತಿಲ್ಲ. ಈ ರಸ್ತೆಯ ಒಂದು ಬದಿಯಲ್ಲಿ ಬೃಹತ್ ಹೊಂಡವುAಟಾ ಗಿದೆ. ಇಂದು ಮಧ್ಯಾಹ್ನ ಮೇಲೆ ತೆರಳುತ್ತ್ತಿದ್ದ ಕಾರೊಂದರ ಚಕ್ರ ಅದರಲ್ಲಿ ಸಿಲುಕಿಕೊಂಡು ಚಾಲಕ ತೆರಳಲಾರದೆ ಒದ್ದಾಡುತ್ತ ಕಾರು ಹಿಂಬದಿಗೆ ಚಲಿಸಲಾರಂಭಿಸಿತು. ಇದರಿಂದಾಗಿ ಹಿಂಬದಿಯಲ್ಲಿದ್ದ ಕಾರು, ಬೈಕ್ ಇತ್ಯಾದಿ ಅನೇಕ ವಾಹನಗಳ ಚಾಲಕರು, ಸವಾರರು ಚಡಪಡಿಸಲಾರಂಭಿಸಿದರು.