ಮಡಿಕೇರಿ, ನ. ೧೬ : ೧೦೦೦ ಮೀಟರ್ ಹಾಗೂ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ರಿಯಾ ಕೆ.ಜಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇತ್ತೀಚೆಗೆ ಗೋಣಿಕೊಪ್ಪ ಕಾಲ್ಸ್ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದ ಈಕೆ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲಿದ್ದಾಳೆ.
ಮೂರ್ನಾಡು ಜ್ಞಾನಜ್ಯೋತಿ ಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಿಯಾಗೆ ತನ್ನ ತಂದೆ ಕರ್ಣಯ್ಯನ ಗಣೇಶ್ ಕುಮಾರ್ ತರಬೇತುದಾರರಾಗಿದ್ದಾರೆ.