ಸೋಮವಾರಪೇಟೆ,ನ.೧೫: ನಾವು ಪ್ರತಿಷ್ಠಾನದ ವತಿಯಿಂದ ತಾ. ೨೦ರಂದು ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಬೆಳಕು ಅಭಿಯಾನದಡಿ ನೇತ್ರದಾನ ಮತ್ತು ದೇಹದಾನಕ್ಕೆ ನೋಂದಾಯಿಸಿಕೊAಡವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಗೌತಮ್ ಕಿರಗಂದೂರು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೯ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾಧಿಕಾರಿ ಬಿ.ಸಿ. ಸತೀಶ್, ಎಂಬೆಸಿ ಗ್ರೂಪ್‌ನ ಸಹಾಯಕ ಉಪಾಧ್ಯಕ್ಷರಾದ ಹರಪಳ್ಳಿ ರವೀಂದ್ರ, ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಆರ್. ಮುತ್ತಣ್ಣ, ರಾಜ್ಯ ಸರ್ಕಾರದ ಸಾಂಸ್ಥಿಕ ಮತ್ತು ಸಾಮಾಜಿಕ ಸಲಹೆಗಾರರಾದ ಕೆ.ವಿ. ಮಹೇಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ಹಾಗೂ ಡೀನ್ ಡಾ|| ಕಾರ್ಯಪ್ಪ, ಹಾಸನದ ಭಾರತ ಜ್ಞಾನ-ವಿಜ್ಞಾನ ಸಂಸ್ಥೆ ಉಪಾಧ್ಯಕ್ಷರಾದ ಅಹ್ಮದ್ ಹಗರೆ, ಬೆಂಗಳೂರಿನ ಎಸ್ಸಿಲರ್ ವಿಷನ್ ಹಿರಿಯ ವ್ಯವಸ್ಥಾಪಕ ಧರ್ಮಪ್ರಸಾದ್ ರೈ, ಅಂತರ ರಾಷ್ಟಿçÃಯ ಕಿಕ್ ಬಾಕ್ಸರ್ ಆರ್. ಗಿರೀಶ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಜಿ. ದೀಪಕ್, ಹಾಸನದ ಕರ್ನಾಟಕ ಅಂಧರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಮಹೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.