ನಾಪೋಕ್ಲು, ನ. ೧೫: ಹಳೇತಾಲೂಕು, ಮೂಟೇರಿ ಹಾಗೂ ನಾಪೋಕ್ಲುವಿನ ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ ಹಳೇ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಸಮಾಜದ ಅಧ್ಯಕ್ಷೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಮಾತನಾಡಿದರು.

ಈ ಸಂದರ್ಭ ಛದ್ಮವೇಷ ಧರಿಸಿ ಮನರಂಜಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಭಾಗ್ಯಜೋತಿ, ಕೆಲೇಟಿರ ರಂಜನ್, ಆರೋಗ್ಯ ಕಾರ್ಯಕರ್ತೆ ಉಮಾಮಹೇಶ್ವರಿ, ಮಹಿಳಾ ಸಮಾಜದ ಸದಸ್ಯೆ ರೋಹಿಣಿ, ಅನಿತಾ, ಆಶಾ ಕಾರ್ಯಕರ್ತೆ ರಮ್ಯಾ, ಕೃತಿಕಾ, ಜ್ಯೋತಿ, ತ್ರಿಶಾ, ದೇಚಮ್ಮ, ಮೋನಿಸ ಮತ್ತು ಮಕ್ಕಳ ಪೋಷಕರು ಇದ್ದರು.