ಮಡಿಕೇರಿ ನ.೧೫ : ಕೊಯವ ಸಮಾಜದ ೧೬ನೇ ವಾರ್ಷಿಕ ಮಹಾಸಭೆ ಮೂರ್ನಾಡಿನ ಎ.ಪಿ.ಸಿ.ಎಂ.ಎಸ್ ನ ಸಭಾಂಗಣದಲ್ಲಿ ನಡೆಯಿತು.
ಸಮಾಜದ ಅಧ್ಯಕ್ಷ ಜಿಲ್ಲಂಡ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೦೨೦-೨೧ನೇ ಸಾಲಿನ ೧೦ನೇ ಮತ್ತು ಪಿಯುಸಿ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ಕನ್ನಂಡ ದ್ರಾವಿಡ್ ಪೊನ್ನಣ್ಣ, ಮುಕ್ಕಾಟಿರ ಅರುಣ್ ಚಂಗಪ್ಪ, ತೋರೆರ ಮೋನಿಕಾ ಮುತ್ತಣ್ಣ ಹಾಗೂ ಮುಕ್ಕಾಟಿರ ವರುಣ್ ಜೋಯಪ್ಪ ಅವರಿಗೆ ಸಮಾಜದ ದತ್ತಿನಿಧಿಯಿಂದ ಪ್ರೋತ್ಸಾಹ ಧನ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.
ಪಿ.ಜಿ, ಸಿ.ಇ.ಟಿ ಬರೆದು ಸರಕಾರಿ ಸ್ಥಾನ ಪಡೆದುಕೊಂಡ ಅಭ್ಯರ್ಥಿಗಳಾದ ನರ್ಸಿಂಗ್ನಲ್ಲಿ ಕಾಂಞAಗಡ ಇಂದಿರಾ, ಬಿ.ಫರ್ಮಾ ಎಂಟ್ರನ್ಸ್ ಹಾಗೂ ಎಂ.ಫರ್ಮಾದಲ್ಲಿ ಜಿಲ್ಲಂಡ ಅರ್ಪಿತ ಮಾದಪ್ಪ, ಬಿ.ಇ.ನಲ್ಲಿ ಅಚ್ಚಪಂಡ ಪೂಣಚ್ಚ ಅವರಿಗೆ ದಾನಿಗಳು ಹಾಗೂ ಸಮಾಜದ ಉಪಾಧ್ಯಕ್ಷ ಡಾ.ಸುಭಾಷ್ ನಾಣಯ್ಯ ಪ್ರೋತ್ಸಾಹಧನ ವಿತರಿಸಿದರು.
ಕಳೆದ ಮಹಾಸಭೆ ವರದಿಯನ್ನು ಗೌರವ ಕಾರ್ಯದರ್ಶಿ ತೋರೆರ ಕಾರ್ಯಪ್ಪ ವಾಚಿಸಿದರು. ೨೦೨೦-೨೧ನೇ ಸಾಲಿನ ಆಡಿಟ್ ವರದಿ ಮಂಡಿಸಿ ಚರ್ಚಿಸಲಾಯಿತು. ಅಚ್ಚಪಂಡ ಧರ್ಮಾವತಿ ಪ್ರಾರ್ಥಿಸಿದರೆ, ಮಲ್ಲಂಡ ಮಹೇಶ್ ವಂದಿಸಿದರು. ಮೇಚುರ ಮಮತ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.
ಪದವಿ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫಲಿತಾಂಶ ಬಂದ ನಂತರ ಪ್ರೋತ್ಸಾಹಧನ ನೀಡಲು ಸಭೆ ನಿರ್ಧರಿಸಿತು. ಸಂಘದ ಮೃತ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಸಮಾಜದ ನಿರ್ದೇಶಕರಾದ ಮುಕ್ಕಾಟಿರ ಹ್ಯಾರಿ ಪೂಣಚ್ಚ, ಚೋಕಿರ ಡಾಲ, ಸುಳ್ಳೆರ ಸೋಮಯ್ಯ, ಈರಮಂಡ ವಿಜಯ್, ಕಳ್ಳಿರ ನಾಣಯ್ಯ, ಚೋಕಿರ ವನಿತಾ ವಿಜಯ್, ಈರಮಂಡ ದಮಯಂತಿ, ನೇಂಡುಮAಡ ಗೀತಾ ನಾಣಯ್ಯ, ಮೇತಿರ ಹರೀಶ್ ಉಪಸ್ಥಿತರಿದ್ದರು.