*ಗೋಣಿಕೊಪ್ಪ, ನ. ೧೫: ಆರೋಗ್ಯ ಕಾಪಾಡಿಕೊಳ್ಳಲು ತಂಬಾಕು ಇನ್ನಿತರ ಮಾದಕ ವ್ಯಸನಗಳಿಂದ ಮುಕ್ತರಾಗಿ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಕರೆ ನೀಡಿದರು.

ತಾಲೂಕು ವೈದ್ಯಾಧಿಕಾರಿ ಕಚೇರಿ ಆವರಣದ ಮುಂಭಾಗದಲ್ಲಿ ಗುಲಾಬಿ ಆಂದೋಲನ ಜಾಥಾದಲ್ಲಿ ಮಾತನಾಡಿದರು.

ತಂಬಾಕುಗಳ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿವೆÉ. ಇದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಕಾಣಿಸಿಕೊಂಡು ಆರೋಗ್ಯದಲ್ಲಿ ಕಾಡುತ್ತದೆ. ಇದರಿಂದ ಪ್ರತಿಯೊಬ್ಬರು ಮುಕ್ತರಾಗಲು ತಂಬಾಕು ಸೇವನೆಯಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಕಿರಿಯ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತರು ಗುಲಾಬಿ ಆಂದೋಲನದ ಜಾಥಾದಲ್ಲಿ ಪಾಲ್ಗೊಂಡು ಕೋಟ್ಪಾ ಕಾಯ್ದೆಯಡಿ ಸಾರ್ವಜನಿಕರಿಗೆ ತಂಬಾಕು ಮಾರಾಟ ಮತ್ತು ಸೇವನೆಯಿಂದ ಮುಕ್ತರಾಗಲು ಜಾಗೃತಿ ಅಭಿಯಾನದ ಮೂಲಕ ಪಟ್ಟಣದ ಅಂಗಡಿ ಮಳಿಗೆಗಳಿಗೆ ಜಾಥಾಕ್ಕೆ ಎದುರಾಗುವ ಸಾರ್ವಜನಿಕರಿಗೆ ಗುಲಾಬಿ ಹೂಗಳನ್ನು ನೀಡಿದರು.

ಈ ಸಂದರ್ಭ ಉಪನಿರೀಕ್ಷಕ ಸುಬ್ಬಯ್ಯ ಸೇರಿದಂತೆ ತಾಲೂಕು ವೈದ್ಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.