ಮಡಿಕೇರಿ ನ.೧೫ : ಕೊಡಗು ರಕ್ಷಣಾ ವೇದಿಕೆ ಸಂಪಾಜೆ ಹೋಬಳಿ ಘಟಕದ ವತಿಯಿಂದ ಚೆಂಬು ಗ್ರಾಮದ ಕಟ್ಟಪಳ್ಳಿ, ಉಂಬಳೆ, ಕುದುರೆಪಾಯ ಮತ್ತು ದಬ್ಬಡ್ಕ ಗ್ರಾಮದಲ್ಲಿ ಉಷಾಕಿರಣ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತವಾಗಿ ಸೋಲಾರ್ ವಿದ್ಯುತ್ ವ್ಯವಸ್ಥೆ ನೀಡಲಾಯಿತು.
ವೇದಿಕೆಯ ಸಂಪಾಜೆ ಹೋಬಳಿ ಅಧ್ಯಕ್ಷÀ ಜ್ಞಾನೇಶ್ ನಿಡಿಂಜಿ, ಸಂಪಾಜೆ ಉಸ್ತುವಾರಿ ಹೇಮಾದರ ಹೊಸೂರು, ಕುದುರೆಪಾಯ ಘಟಕದ ಅಧ್ಯಕ್ಷ ಜಯಂತ್ ಪೊಯ್ಯಮಜಲು, ಕಟ್ಟಪಳ್ಳಿ ಘಟಕದ ಅಧ್ಯಕ್ಷ ದಿನೇಶ್ ಕಟ್ಟಪಳ್ಳಿ, ಉಂಬಳೆ ಘಟಕದ ಅಧ್ಯಕ್ಷ ಪ್ರಕಾಶ್ ಅತ್ಯಾಡಿ, ವಿಜಯ ಕೊಪ್ಪ, ಪ್ರದೀಪ ಕುಡೆಕಲ್ಲು, ಹರೀಶ್ ಉಂಬಳೆ, ಅಚ್ಚಪ ದೇವಂಗೋಡಿ, ತನುಷ್ ದೇವಂಗೋಡಿ, ಕವನ ಅತ್ಯಾಡಿ, ಕಿಶೋರ ಬಂಗಾರಕೋಡಿ, ಬಾಲಕೃಷ್ಣ ಉಂಬಳೆ, ಯಕ್ಷಿತ್ ಕುದುರೆಪಾಯ, ಹೇಮಂತ್ ಕುದುರೆಪಾಯ, ನಂದನ್ ಕುದುರೆಪಾಯ, ರಂಜಿತ್ ಕುಮಾರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.