ಮಡಿಕೇರಿ, ನ. ೧೫: ಇತ್ತೀಚೆಗೆ ರಾಷ್ಟçಪತಿ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭಾರತದ ಹಾಕಿ ಪಟು ಕೊಡಗಿನವರಾದ ಡಾ|| ಮೊಳ್ಳೆರ ಪಿ. ಗಣೇಶ್ ಅವರನ್ನು ಕಾರ್ಯಕ್ರಮದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿಸಿ ತಡವಾಗಿಯಾದರೂ ಪದ್ಮಶ್ರೀ ಬಿರುದು ದೊರೆತಿರುವ ಬಗ್ಗೆ ಹೇಳಿ ಅಭಿನಂದನೆ ಸಲ್ಲಿಸಿದರು.

ಸುಮಾರು ನಾಲ್ಕು ನಿಮಿಷಗಳ ಕಾಲ ಇವರೊಂದಿಗೆ ಮಾತನಾಡಿದ ಪ್ರಧಾನಿ ಭಾರತೀಯ ಹಾಕಿಯ ಬೆಳವಣಿಗೆ ಕುರಿತು ಚರ್ಚಿಸಿದರು. ಅಲ್ಲದೆ ಕೊಡಗಿನ ಹಾಕಿಯ ಬಗ್ಗೆ ಹಾಗೂ ಭಾರತ ತಂಡದಲ್ಲಿ ಕೊಡಗಿನ ಹಾಕಿಪಟುಗಳು ಇಲ್ಲದಿರುವ ಕುರಿತು ಪ್ರಶ್ನಿಸಿದರು. ಇದಕ್ಕೆ ಮುಂದಿನ ದಿನದಲ್ಲಿ ಕೊಡಗಿನ ಆಟಗಾರರು ಮತ್ತೆ ತಂಡಕ್ಕೆ ಬರಲಿದ್ದಾರೆ ಎಂದು ತಾವು ವಿಶ್ವಾಸ ವ್ಯಕ್ತಪಡಿಸಿದ್ದಾಗಿ ಗಣೇಶ್ ಅವರು ‘ಶಕ್ತಿ’ಗೆ ತಿಳಿಸಿದರು.