ಸೋಮವಾರಪೇಟೆ,ನ.೧೫: ಪಟ್ಟಣದ ವಾರ್ಡ್ ೧೧ರಲ್ಲಿರುವ ವರ್ಕ್ಶಾಪ್ ಕಟ್ಟಡದಲ್ಲಿ ಅನಧಿಕೃತ ವಾಗಿ ಗೋಡೆಗಳನ್ನು ನಿರ್ಮಿಸ ಲಾಗಿದ್ದು, ಇದನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತೆರವುಗೊಳಿಸಿದರು.

ಅಮ್ಮಣ್ಣ ಗ್ಯಾರೇಜ್ ಸಮೀಪವಿರುವ ಪಾಪ್ಯುಲರ್ ಬೈಕ್ ಜೋನ್ ವರ್ಕ್ಶಾಪ್‌ಗೆ ಪಂಚಾಯಿತಿ ಯಿಂದ ಯಾವುದೇ ಅನುಮತಿ ಪಡೆಯದೇ ನಿನ್ನೆ ದಿನ ಗೋಡೆಗಳನ್ನು ನಿರ್ಮಿಸಲಾಗಿತ್ತು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಇಂದು ಪಂಚಾಯಿತಿಯಿAದ ಗೋಡೆಗಳನ್ನು ತೆರವುಗೊಳಿಸಲಾಯಿತು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ವಾರ್ಡ್ ಸದಸ್ಯ ಬಿ.ಆರ್. ಮಹೇಶ್, ಪೊಲೀಸ್ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.