ಮಡಿಕೇರಿ, ನ. ೧೫: ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಷಿಯಲ್ ವೆಲ್‌ಫೇರ್ ಸೆಂಟರ್‌ನ ಮಹಾಸಭೆ ಸಂಸ್ಥೆಯ ಅಧ್ಯಕ್ಷ ಮೂವೇರ ಕೆ. ಶಂಭು ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ತಾ. ೧೪ ರಂದು ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆ, ಲೆಕ್ಕಪತ್ರ ಅಭಿವೃದ್ಧಿ ಕೆಲಸ, ಮುಂದಿನ ಯೋಜನೆಗಳ ಕುರಿತಾಗಿ ಚರ್ಚೆಗಳು ನಡೆದು ನಿರ್ಣಯ ಅಂಗೀಕರಿಸಲಾಯಿತು. ಸಂಸ್ಥೆಯ ಸದಸ್ಯರು ಅಥವಾ ಸಂಬAಧಿಗಳಲ್ಲಿ ಯಾರಿಗಾದರೂ ಸೀಳು ತುಟಿಗೆ ಸಂಬAಧಿಸಿದAತೆ ಸಮಸ್ಯೆಗಳಿದ್ದಲ್ಲಿ ಈ ಬಗ್ಗೆ ಉಚಿತ ಶಸ್ತçಚಿಕಿತ್ಸೆ ಮಾಡಿಸಿಕೊಡುವ ಕುರಿತು ಸಂಸ್ಥೆಯ ಮೂಲಕ ನೆರವು ನೀಡಲು ಉದ್ದೇಶಿಸಲಾಯಿತು. ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಈ ಬಗ್ಗೆ ತಜ್ಞ ವೈದ್ಯರು ಸಹಕರಿಸಲು ಮುಂದಾಗಿರುವ ಬಗ್ಗೆ ಸಂಸ್ಥೆಯ ನಿರ್ದೇಶಕ ಪಡೇಟಿರ ಹರೀಶ್ ಮುತ್ತಪ್ಪ ಸಭೆಗೆ ತಿಳಿಸಿದರು. ಸಂಸ್ಥೆಯ ಚಟುವಟಿಕೆ ಬಗ್ಗೆ ಅಧ್ಯಕ್ಷ ಶಂಭು ಸುಬ್ಬಯ್ಯ ಹಾಗೂ ಕಾರ್ಯದರ್ಶಿ ಚೆರ್‌ಮಂದAಡ ಮಣಿ ಪೊನ್ನಪ್ಪ ಮಾಹಿತಿಯಿತ್ತರು. ಖಜಾಂಜಿ ಬಿದ್ದಂಡ ಬೆನ್ ಬೆಳ್ಯಪ್ಪ ಲೆಕ್ಕಪತ್ರದ ಕುರಿತು ವಿವರ ಒದಗಿಸಿದರು.
ಮುದ್ದಂಡ ಯುಕ್ತಾ ಮುದ್ದಪ್ಪ ಪ್ರಾರ್ಥಿಸಿ, ಶಂಭು ಸುಬ್ಬಯ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ ವಂದಿಸಿದರು. ಈ ಸಂದರ್ಭ ಮುಂದಿನ ಆಡಳಿತ ಮಂಡಳಿಯ ನಿರ್ದೇಶಕರ ವಿವರವನ್ನು ಸಭೆಗೆ ನೀಡಲಾಯಿತು. ಚುನಾವಣಾಧಿಕಾರಿ ಮುಕ್ಕಾಟಿರ ಡಿ. ಕಾವೇರಪ್ಪ (ಮಿಟ್ಟು) ಈ ಕುರಿತು ವಿವರವಿತ್ತರು.