ಕುಶಾಲನಗರ, ನ. ೧೪: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಟಿ.ಜಿ. ಪ್ರೇಮಕುಮಾರ್ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ನೂತನ ಸಮಿತಿಗೆ ಕುಶಾಲನಗರ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನೂತನ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ಕೆ.ಟಿ. ಬೇಬಿ ಮ್ಯಾಥ್ಯೂ ಹಾಗೂ ಎಂ.ಇ. ಮೊಯಿದ್ದೀನ್, ಕಾರ್ಯದರ್ಶಿಯಾಗಿ ಡಿ. ಕೃಷ್ಣ ಚೈತನ್ಯ, ಸಹ ಕಾರ್ಯದರ್ಶಿ ಯಾಗಿಎನ್.ಕೆ.ಮಾಲಾದೇವಿ ಹಾಗೂ ಕೋಶಾಧಿಕಾರಿಯಾಗಿ ಜಿ. ಶ್ರೀಹರ್ಷ ಆಯ್ಕೆಯಾದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ.ಜಿ.ಪ್ರೇಮಕುಮಾರ್ ಅವರಿಗೆ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಫಿಲಿಪ್ವಾಸ್ ಅಧಿಕಾರ ಹಸ್ತಾಂತರಿಸಿ ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯರಾದ ಚಿಕ್ಕಮಗಳೂರಿನ ಎ.ಎನ್. ಮಹೇಶ್, ಟಿ.ಜಿ ಕೃಷ್ಣಮೂರ್ತಿ ರಾಜೇ ಅರಸ್ ಈ ಸಂದರ್ಭದಲ್ಲಿ ಹಾಜರಿದ್ದರು.