ಪೊನ್ನಂಪೇಟೆ, ನ. ೧೪: ಗೋಣಿಕೊಪ್ಪಲು ಕಾವೇರಿ ಕಾಲೇಜು ರಾಷ್ಟಿçÃಯ ಸೇವಾ ಯೋಜನೆ ಮತ್ತು ಮಡಿಕೇರಿ ನೆಹರು ಯುವಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಅಜಾದಿ ಅಮೃತ ಮಹೋತ್ಸವ ಅಂಗವಾಗಿ ‘ದೇಶಭಕ್ತಿ ಮತ್ತು ರಾಷ್ಟç ನಿರ್ಮಾಣದಲ್ಲಿ ಯುವಜನರು’ ಎಂಬ ವಿಷಯದ ಕುರಿತು ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕುಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟç ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲೇ ರಾಷ್ಟçಪ್ರೇಮವನ್ನು ಮೈಗೂಡಿಸಿಕೊಂಡು, ರಾಷ್ಟçದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಭಾಷಣ ಸ್ಪರ್ಧೆಯ ತೀರ್ಪುಗಾರರಾಗಿ ಆಂಗ್ಲ ವಿಭಾಗದ ಪ್ರಾಧ್ಯಾಪಕಿ ಪೂನಂ, ಹಿಂದಿ ವಿಭಾಗದ ಮುಖ್ಯಸ್ಥೆ ಸವಿತಾ ಕಾರ್ಯನಿರ್ವಹಿಸಿದರು.

ಎನ್.ಎಸ್.ಎಸ್. ಅಧಿಕಾರಿ ಹಾಗೂ ಸ್ಪರ್ಧೆಯ ಸಂಯೋಜಕ ಎಂ.ಎನ್. ವನಿತ್‌ಕುಮಾರ್ ಉಪಸ್ಥಿತರಿದ್ದರು. ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಲಕ್ಷ್ಯ ರಂಜಿತ್, ವಸುಂಧರಾ ಭಾರ್ಗವ, ರೋಷನ್, ದರ್ಶಿನಿ, ಜಾನ್ಸಿ ರೈ ಜಿಲ್ಲಾಮಟ್ಟದ ಸರ್ಧೆಗೆ ಆಯ್ಕೆಯಾದರು. ವಿದ್ಯಾರ್ಥಿ ವಸುಂಧರಾ ಭಾರ್ಗವ್ ಮತ್ತು ದೀಪಿಕ ಕಾರ್ಯಕ್ರಮ ನಿರೂಪಿಸಿದರು.