ಮಡಿಕೇರಿ, ನ. ೧೪: ಕರ್ನಾಟಕ ಮಾತ್ರವಲ್ಲದೆ, ದೇಶವನ್ನೇ ಅಚ್ಚರಿಪಡಿಸಿರುವ ಬಿಟ್ಕಾಯಿನ್ ಹಗರಣಕ್ಕೆ ಸಂಬAಧಿಸಿದAತೆ, ಹ್ಯಾಕ್ ಮಾಡಿ ಗಳಿಸಿದ ಬಿಟ್ಕಾಯಿನ್ಗಳನ್ನು ನಗದು ರೂಪದಲ್ಲಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿರುವ ಖಾತೆಗಳ ಪಟ್ಟಿಯಲ್ಲಿ ‘ಕೂರ್ಗ್ ಟ್ರೇಡ್ಲಿಂಕ್ಸ್’ ಎಂಬ ಹೆಸರಿನ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆ ಮಾಡಿರುವ ಕುರಿತು ಬಿಟ್ಕಾಯಿನ್ ಟ್ರೇಡರ್ ರಾಬಿನ್ ಖಂಡೇಲ್ವಾಲಾ ಅವರು ಬೆಂಗಳೂರು ಸೈಬರ್ ಪೊಲೀಸ್ ಬಳಿ ಒಪ್ಪಿಕೊಂಡಿದ್ದಾರೆ.
ವಿವಿಧ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ, ಮತ್ತದನ್ನು ಸರಿಪಡಿಸಲು ವೆಬ್ಸೈಟ್ ಮಾಲೀಕರ ಬಳಿ ಕ್ರಿಪ್ಟೋಕರೆನ್ಸಿಯಾದ ಬಿಟ್ಕಾಯಿನ್ನ ಬೇಡಿಕೆ ಇಡುವ ಮೂಲಕ, ಬಿಟ್ಕಾಯಿನ್ ಎಕ್ಸೆ÷್ಚಂಜ್ ವೆಬ್ಸೈಟ್ ಹ್ಯಾಕ್ ಮಾಡುವ ಮೂಲಕ, ಸೇರಿದಂತೆ ವಿವಿಧ ರೀತಿಗಳಲ್ಲಿ ತನ್ನ ತಾಂತ್ರಿಕ ಜ್ಞಾನವನ್ನು ದುರುಪಯೋಗ ಪಡಿಸಿ ಅಕ್ರಮವಾಗಿ ಬಿಟ್ಕಾಯಿನ್ಗಳನ್ನು ಗಳಿಸಿ ಪೊಲೀಸರ ಕೈ ಸೇರಿರುವ ಹ್ಯಾಕರ್ ಶ್ರೀ ಕೃಷ್ಣ (ಶ್ರೀಕಿ), ಬಿಟ್ಕಾಯಿನ್ ಟ್ರೇಡರ್ ಪಶ್ಚಿಮ ಬಂಗಾಳದ ರಾಬಿನ್ ಖಂಡೇಲ್ವಾಲಾ ಮೂಲಕ ಬಿಟ್ ಕಾಯಿನ್ಗಳನ್ನು
(ಮೊದಲ ಪುಟದಿಂದ) ನಗದು ರೂಪದಲ್ಲಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾನೆ.
ಸುಮಾರು ರೂ.೩ ಕೋಟಿ ೪೫ ಲಕ್ಷ ೬೨ ಸಾವಿರದ ೫೯೦ ನಗದನ್ನು ಭಾರತÀದಾದ್ಯಂತ ವಿವಿಧ ಖಾತೆಗಳಿಗೆ ಬಿಡಿಬಿಡಿಯಾಗಿ ವರ್ಗಾವಣೆ ಮಾಡಲಾಗಿದ್ದು, ‘ಕೂರ್ಗ್ ಟ್ರೇಡ್ಲಿಂಕ್ಸ್’ ಎಂಬ ಬ್ಯಾಂಕ್ ಖಾತೆ ಹೆಸರಿಗೆ ರೂ೨.೫ ಲಕ್ಷ ವರ್ಗಾವಣೆ ಮಾಡಿರುವುದಾಗಿ ಟ್ರೇಡರ್ ರಾಬಿನ್ ಖಂಡೇಲ್ವಾಲ ಬೆಂಗಳೂರು ಸೈಬರ್ ಕ್ರೆöÊಂ ಪೊಲೀಸರಿಗೆ ಮಾಹಿತಿ ಇತ್ತಿದ್ದಾರೆ.
ಭವಿಷ್ಯದ ಕರೆನ್ಸಿ ಎಂದೇ ಹೇಳಲಾಗುತ್ತಿರುವ ಕ್ರಿಪ್ಟೋಕರೆನ್ಸಿಯಲ್ಲಿ ಹಣಹೂಡಿಕೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಮಾರ್ಕೆಟ್ ಏಳು-ಬೀಳು ಅನುಸಾರ ಇದರ ಮೊತ್ತ ಕೂಡ ಅಂದಾಜಿಸಲಾಗುತ್ತದೆ. ಪ್ರಸ್ತುತ ೧ ಬಿಟ್ಕಾಯಿನ್ನ ಮೊತ್ತ ರೂ.೪೭ ಲಕ್ಷದಷ್ಟಿದೆ. ಇಂತಹ ಸುಮಾರು ಅಸಂಖ್ಯಾತ ಬಿಟ್ಕಾಯಿನ್ಗಳನ್ನು ಶ್ರೀ ಕೃಷ್ಣ ಅಕ್ರಮವಾಗಿ ಗಳಿಸಿದ್ದಾನೆ ಎನ್ನಲಾಗಿದೆ.
ಈ ಪೈಕಿ ೧೩೦ ಬಿಟ್ಕಾಯಿನ್ಗಳನ್ನು ಶ್ರೀ ಕೃಷ್ಣ ರಾಬಿನ್ ಅವರ ವಾಲೆಟ್ಗೆ ವರ್ಗಾವಣೆ ಮಾಡಿದ್ದು, ಇದನ್ನು ಮಾರಾಟ ಮಾಡಿ ಗಳಿಸಿದ ಹಣವನ್ನು ರಾಬಿನ್, ಕೃಷ್ಣ ನೀಡಿರುವ ಸುಮಾರು ೫೭ ಬ್ಯಾಂಕ್ ಖಾತೆಗಳಿಗೆ ಬಿಡಿ ಬಿಡಿಯಾಗಿ ವರ್ಗಾವಣೆ ಮಾಡಿದ್ದಾನೆ. ಈ ಪೈಕಿ 'ಕೂರ್ಗ್ ಟ್ರೇಡ್ ಲಿಂಕ್ಸ್' ಎಂಬ ಖಾತೆಗೂ ಸುಮಾರು ೨.೫ ಲಕ್ಷ ರೂಪಾಯಿ ಹಾಕಿರುವದಾಗಿ ರಾಬಿನ್ ಪೊಲೀಸರೊಂದಿಗೆ ಒಪ್ಪಿಕೊಂಡಿದ್ದಾನೆ.