ಸುಂಟಿಕೊಪ್ಪ,ನ.೧೪: ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೦-೨೧ನೇ ಸಾಲಿನಲ್ಲಿ ೪೫.೨೫ ಲಕ್ಷ ರೂ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ಬಿ.ರಮೇಶ್ ಚಂಗಪ್ಪ ಹೇಳಿದರು.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೬೨ನೇ ವಾರ್ಷಿಕ ಮಹಾಸಭೆಯು ಗುಂಡುಗುಟ್ಟಿ ಮಂಜನಾಥಯ್ಯ ಸಹಕಾರ ಭವನದಲ್ಲಿ ನಡೆಯಿತು.
ಕೃಷಿಕರಿಗೆ ಬೇಕಾದ ಪರಿಕರಗಳು ಗೊಬ್ಬರ ಸಂಘದಲ್ಲಿ ಸೂಕ್ತ ಅವಧಿಯಲ್ಲಿ ಸಿಗುತ್ತಿಲ್ಲ. ಸಿಬ್ಬಂದಿಗಳಿಗೆ ವಾಣಿಜ್ಯ ಸಂಕೀರ್ಣದ ಕಟ್ಟಡ ಬಾಡಿಗೆ ನೀಡುವಾಗ ಮಾಸಿಕ ಬಾಡಿಗೆ ಪಡೆದುಕೊಳ್ಳುವುದು ಸೂಕ್ತ ಎಂದು ಸದಸ್ಯ ಕಲ್ಲೂರು ಸುಬ್ರಮಣಿ ಸಲಹೆ ನೀಡಿದರು.
ಅಧ್ಯಕ್ಷ ರಮೇಶ ಚಂಗಪ್ಪ ಮಾತನಾಡಿ, ಗೊಬ್ಬರದ ಕೊರತೆ ಎಲ್ಲೆಡೆ ಇದೆ. ಮುಂದಿನ ದಿನಗಳಲ್ಲಿ ಅದು ಸರಿಪಡಿಸಲಾಗುವುದು. ಮಾಸಿಕ ಬಾಡಿಗೆ ಹಣ ನಿಗದಿಗೊಳಿಸಲಾಗುವುದೆಂದು ಹೇಳಿದರು.
ಮರಣ ನಿಧಿಯ ವಿತರಣೆಯಲ್ಲಿ ಪಾರದರ್ಶಕತೆ ಕಂಡು ಬರುತ್ತಿಲ್ಲ ಇದರಿಂದ ಮರಣ ಹೊಂದಿದ ಸದಸ್ಯರುಗಳ ಕುಟುಂಬಕ್ಕೆ ನಿಧಿ ಸರಿಯಾಗಿ ಸಂದಾಯವಾಗುತ್ತಿಲ್ಲ ಎಂದು ಹಿರಿಯ ಸದಸ್ಯ ಎಂ.ಎ.ವಸAತ ಆಕ್ಷೇಪಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚೈತ್ರಾ ತಮ್ಮಯ್ಯ ಉತ್ತರಿಸಿ ೧೯೪೮ ಸದಸ್ಯರುಗಳಲ್ಲಿ ೫೬೯ ಮಂದಿ ಸದಸ್ಯರುಗಳು ಮಾತ್ರ ಮರಣ ನಿಧಿಗೆ ಹಣ ಜಮಾವಣೆ ಮಾಡಿದ್ದಾರೆ. ಅದರಲ್ಲೂ ೧೧ ವರ್ಷ ಸದಸ್ಯರಾಗಿ ನಿಧನರಾದವರಿಗೆ ಮರಣ ನಿಧಿ ಅವರ ಮನೆಗೆ ತಲುಪಿಸಿದ್ದೇವೆ. ಹೊಸದಾಗಿ ಸದಸ್ಯರಾಗುವವರು ೬೦ ವರ್ಷ ಆಗದವರು ಮರಣ ನಿಧಿ ಖಾತೆಗೆ ಸೇರ್ಪಡೆಗೊಳಿಸುತ್ತಿದ್ದೇವೆ ಎಂದು ಹೇಳಿದರು.
ಸದಸ್ಯರಾದ ಬಿಜು ಮಾತನಾಡಿ ಕಳೆದ ೨ ವರ್ಷಗಳಿಂದ ಸಂಘದಲ್ಲಿ ಪ್ರಭಾರ ಸಿಇಓ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಶ್ವತ ಸಿಇಓ ನೇಮಕ್ಕೆ ಕ್ರಮವಹಿಸಲು ಆಗ್ರಹಿಸಿದರು.
ಸಂಘದಲ್ಲಿ ಇರುವ ಸಾಮಾಗ್ರಿಗಳ ದರ ಇತರೆ ಮಾರುಕಟ್ಟೆಗಿಂತ ಹೆಚ್ಚಾಗಿದೆ ಇದರಿಂದ ಸದಸ್ಯರುಗಳು ಇಲ್ಲಿಗೆ ಬರುತ್ತಿಲ್ಲ ಎಂದೂ ಕೀಚನ ಲಕ್ಷö್ಮಣ ಆರೋಪಿಸಿದರು.
ಸಂಘದ ಸಿಬ್ಬಂದಿ ಆಗಿದ್ದ ಎಸ್.ಎನ್. ಪ್ರತಾಪ ಅವರು ಜೂನ್ ೨೦೨೦ ರಿಂದ ಗೈರಾಗಿದ್ದು, ನೋಟೀಸಿಗೂ ಉತ್ತರ ನೀಡಿಲ್ಲ. ಅವರನ್ನು ಏಕೆ ಸೆಪ್ಟೆಂಬರ್‌ನಿAದ ಗುಮಾಸ್ತರಾಗಿ ಆಡಳಿತ ಮಂಡಳಿ ನೇಮಿಸಿದೆ. ಸಹಕಾರ ಸಂಘದ ಕಾಯ್ದೆ ಪ್ರಕಾರ ೪ ತಿಂಗಳು ಕಛೇರಿಗೆ ಹಾಜರಾಗದಿದ್ದರೆ ಅವರನ್ನು ವಜಾ ಮಾಡಬೇಕು ಎಂದು ಬಿ.ಎನ್. ಚಂದ್ರಶೇಖರ್ ಹಾಗೂ ಕರುಣಾಕರ ಹೇಳಿದರು.
ನಿರ್ದೇಶಕರಾದವರು ಸದಾ ಮಾಸಿಕ ಸಭೆಗೆ ಗೈರಾಗುತ್ತಿರುವ ಬಗ್ಗೆ ಆಡಳಿತ ಮಂಡಳಿ ಕ್ರಮಕೈಗೊಂಡಿಲ್ಲ ಎಂದು ಸದಸ್ಯರುಗಳು ಆಕ್ಷೇಪಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಜಿ.ಕೋಮಲ, ನಿರ್ದೇಶಕರುಗಳಾದ ಎಂ.ಎನ್.ಕೊಮಾರಪ್ಪ, ಎನ್.ಸಿ.ಪೊನಪ್ಪ, ಕೆ.ಎಸ್.ಮಂಜುನಾಥ್, ಪಿ.ಪಿ.ಲೀಲಾವತಿ, ಜರ್ಮಿಡಿಸೋಜ, ಡಿ.ಕೆ.ಗಂಗಾಧರ್, ಡಾ.ಶಶಿಕಾಂತರೈ, ಕೆ.ಪಿ.ಜಗನ್ನಾಥ್, ಪಿ.ಸಿ.ಮೋಹನ, ಆರ್.ಟಿ.ಲಾಂಛನ ಹಾಗೂ ಪಟ್ಟೆಮನೆ ಉದಯಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.