ಶನಿವಾರಸಂತೆ, ನ. ೧೪: ಶನಿವಾರಸಂತೆ ಪಟ್ಟಣದ ಶ್ರೀ ಬೀರಲಿಂಗೇಶ್ವರ ಪ್ರಬಲದೇವಿ ಹಾಗೂ ಪರಿವಾರ ದೇವರ ೩ನೇ ವಾರ್ಷಿಕೋತ್ಸವ ಪೂಜಾ ಮಹೋತ್ಸವ ತಾ. ೨೨ ರಂದು ನಡೆಯಲಿದೆ ಎಂದು ದೇವರ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ತಾ. ೨೨ ರಂದು ಬೆಳಿಗ್ಗೆ ೬ ಗಂಟೆಗೆ ಗಂಗೆಪೂಜೆ, ಗೋಪೂಜೆ, ಮಂಗಳಾರತಿ ನಂತರ ಸಹಕಾರ ಬ್ಯಾಂಕ್ ಹತ್ತಿರದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಕಲಶ ಮೆರವಣಿಗೆಯೊಂದಿಗೆ ಪೂಜಾ ಮಹೋತ್ಸವ ಪ್ರಾರಂಭಗೊಳ್ಳಲಿದೆ.

ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧.೩೦ ರವರೆಗೆ ಪಟ್ಟಣದಲ್ಲಿರುವ ಶ್ರೀ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಸಂಕಲ್ಪ ಪೂಜಾ ಕಾರ್ಯಕ್ರಮ, ಊರು ಒಡೆಯ ದೇವರ ಮಹಾಪೂಜೆ ಕಾರ್ಯಕ್ರಮ, ಬಿದರೂರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ ಕಾರ್ಯಕ್ರಮ, ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಪೂಜೆ, ತ್ಯಾಗರಾಜ ಕಾಲೋನಿಯ ಶ್ರೀ ಚೌಡೇಶ್ವರಿ ಬನದಲ್ಲಿ ದೇವತೆಯ ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ದೇವರ ಮಹಾಪೂಜಾ ಕಾರ್ಯಕ್ರಮ, ಕೆ.ಆರ್.ಸಿ. ವೃತ್ತದಲ್ಲಿರುವ ಬನ್ನಿ ಮಂಟಪದಲ್ಲಿ ಮಹಾಪೂಜೆ, ಶ್ರೀ ರಾಮಮಂದಿರದಲ್ಲಿ ದೇವರಿಗೆ ಮಹಾಪೂಜಾ ಕಾರ್ಯಕ್ರಮ, ಪಟ್ಟಣದ ಮುಖ್ಯರಸ್ತೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಯ ಬಳಿಕ ಮಧ್ಯಾಹ್ನ ೨ ಗಂಟೆಗೆ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವರಿಗೆ ಮಹಾಪೂಜೆ, ಮಂಗಳಾರತಿ, ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ.