ಮಡಿಕೇರಿ, ನ. ೧೩: ನಗರದಲ್ಲಿ ಶಾಖೆ ಹೊಂದಿರುವ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಸುಳ್ಯದ ಕೊಡಿಯಾಲ್ ಬೈಲ್‌ನ ಗೌಡ ಸಮುದಾಯ ಭವನದಲ್ಲಿ ಅಧ್ಯಕ್ಷ ಪಿ.ಸಿ. ಜಯರಾಮ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ೧೫ ಶಾಖೆಗಳೊಂದಿಗೆ ರಾಜ್ಯಾದ್ಯಂತ ವ್ಯವಹಾರ ನಡೆಸುತ್ತಿದ್ದು, ವರದಿ ವರ್ಷದಲ್ಲಿ ೪೫೩ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ೧ ಕೋಟಿ ೯ ಲಕ್ಷದ ೭೪ ಸಾವಿರ ಲಾಭ ಗಳಿಸಿದೆ. ಸದಸ್ಯರಿಗೆ ಶೇ. ೧೫ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಪಿ.ಸಿ. ಜಯರಾಮ ಹೇಳಿದರು. ಸಹಕಾರ ಸಂಘವು ೧೯೯೭ ರಲ್ಲಿ ಗೌಡರ ಯುವ ಸೇವಾ ಸಂಘ ಇವರಿಂದ ಪ್ರವರ್ತಿಸಲ್ಪಟ್ಟಿದ್ದು, ಆರಂಭದಲ್ಲಿ ಕೇವಲ ೪೩೦ ಸದಸ್ಯರಿಂದ ರೂ. ೫ ಲಕ್ಷದ ೯೫ ಸಾವಿರ ಪಾಲು ಬಂಡವಾಳದಿAದ ಆರಂಭವಾದ ಸಹಕಾರ ಸಂಘ. ಪ್ರಾರಂಭದಲ್ಲಿ ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ವ್ಯವಹಾರ ಪ್ರಸ್ತುತ ತನ್ನ ಕಾರ್ಯಕ್ಷೇತ್ರವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸಿಕೊಂಡಿದೆ. ವರ್ಷದ ಅಂತ್ಯಕ್ಕೆ ೧೩೧೩೪ ಜನ ವಿವಿಧ ವರ್ಗದ ಸದಸ್ಯರಿದ್ದು ಇವರಿಂದ ರೂ. ೩ ಕೋಟಿ ೨೧ ಲಕ್ಷ ಪಾಲು ಬಂಡವಾಳ ಹೊಂದಿ ರೂ. ೧೦೦.೦೩ ಕೋಟಿ ಠೇವಣಿ ಸಂಗ್ರಹಿಸಿದ್ದು, ಸದಸ್ಯರುಗಳಿಗೆ ರೂ. ೮೬.೨೪ ಕೋಟಿ ವಿವಿಧ ಸಾಲ ವಿತರಿಸಲಾಗಿದೆ. ಸಂಘವು ವಿವಿಧ ಬ್ಯಾಂಕುಗಳಲ್ಲಿ ರೂ.೧೬.೬೫ ಕೋಟಿ ಧನವಿನಿಯೋಗ ಮಾಡಿದೆ. ಸಂಘದ ಆಡಿಟ್ ವರ್ಗೀಕರಣವು ಎ ತರಗತಿಯಾಗಿದ್ದು, ಪ್ರಸ್ತುತ ಸಹಕಾರಿ ವರ್ಷದಲ್ಲಿ ಕೋವಿಡ್‌ನಿಂದಾಗಿ ವ್ಯವಹಾರ ಸ್ಥಗಿತವಾಗಿದ್ದರೂ ಸಹಕಾರ ಸಂಘದ ಸದಸ್ಯರುಗಳು ಹಾಗೂ ಗ್ರಾಹಕರು ಸಂಘಕ್ಕೆ ಉತ್ತಮ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಸಂಘದಲ್ಲಿ ರೂ. ೦೬.೦೧ ಕೋಟಿ ವಿವಿಧ ನಿಧಿಗಳಿದ್ದು ಸಂಘದ ದುಡಿಯುವ ಬಂಡವಾಳವು ರೂ. ೧೧೦.೧೯ ಕೋಟಿ ಇದೆ. ಸಂಘದ ಎಲ್ಲ ಶಾಖೆಗಳಲ್ಲಿಯೂ ಇ - ಸ್ಟಾಂಪಿAಗ್ ಕೇಂದ್ರಗಳನ್ನು ತೆರೆದಿದ್ದು, ಸುಳ್ಯದ ಶಾಖೆಯಲ್ಲಿ ಕಡಿಮೆ ಬಾಡಿಗೆಗೆ ಸೇಫ್ ಡೆಪಾಸಿಟ್ ಲಾಕರನ್ನು ಸದಸ್ಯರುಗಳಿಗೆ ನೀಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ಆರ್‌ಟಿಜಿಎಸ್, ನೆಫ್ಟ್ ಸೌಲಭ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಘವು ಪ್ರಸ್ತುತ ೧೫ ಶಾಖೆಗಳನ್ನು ಹೊಂದಿದ್ದು ವರದಿ ಸಾಲಿನಲ್ಲಿ ಸಂಘದ ಕಾರ್ಯ ವ್ಯಾಪ್ತಿಯನ್ನು ಸುಬ್ರಹ್ಮಣ್ಯ, ಮಡಂತ್ಯಾರು, ಚೇರಂಬಾಣೆ ಹಾಗೂ ಸೋಮವಾರಪೇಟೆಯ ಆಲೂರು ಸಿದ್ದಾಪುರದಲ್ಲಿ ಶಾಖೆಯನ್ನು ಆರಂಭಿಸಲು ಆಡಳಿತ ಮಂಡಳಿಯು ಯೋಜನೆ ರೂಪಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರೂ. ೧೨೫ ಕೋಟಿ ಠೇವಣಿ ಸಂಗ್ರಹಿಸಿ ರೂ. ೧೦೦ ಕೋಟಿ ಸಾಲ ವಿತರಿಸಿ ರೂ. ೫೦೦ ಕೋಟಿಯಷ್ಟು ವ್ಯವಹಾರ ನಡೆಸಲು ಯೋಜನೆ ರೂಪಿಸಿರು ತ್ತೇವೆ. ಸಂಘವು ಸದಸ್ಯತನ, ಠೇವಣಿ, ಸಂಗ್ರಹ ಸಾಲ ವಿತರಣೆ ಹಾಗೂ ಒಟ್ಟು ವ್ಯವಹಾರದಲ್ಲಿ ಗಣನೀಯ ಪ್ರಗತಿಯನ್ನು ಕಂಡಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಗುರಿ ಹಾಗೂ ಕಾರ್ಯ ಯೋಜನೆಯನ್ನು ಸಾಧಿಸುವ ಆತ್ಮವಿಶ್ವಾಸವನ್ನು ಹೊಂದ ಲಾಗಿದೆ. ಸಂಘವು ಈಗಾಗಲೇ ೨೩ ವರ್ಷಗಳನ್ನು ಪೂರೈಸಿ ೨೪ ನೇ ವರ್ಷದಲ್ಲಿ ಮುನ್ನಡೆಯುತ್ತಿದ್ದು, ೨೫ ವರ್ಷಗಳ ಬೆಳ್ಳಿ ಹಬ್ಬ ಕಾರ್ಯಕ್ರಮ ವನ್ನು ಅವಿಸ್ಮರಣೀಯವಾಗಿ ನಡೆಸಲು ಸಂಘದ ಆಡಳಿತ ಮಂಡಳಿಯು ಯೋಜನೆ ರೂಪಿಸಿದೆ. ಬೆಳ್ಳಿ ಹಬ್ಬದ ಪ್ರಯುಕ್ತ ೨೫ ಶಾಖೆಗಳನ್ನು ಹೊಂದುವ ಗುರಿ ಇದೆ ಎಂದು ವಿವರಿಸಿದರು. ಉಪಾಧ್ಯಕ್ಷ ಮೋಹನ್ ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಎ.ವಿ. ತೀರ್ಥರಾಮ, ಚಂದ್ರಕೋಲ್ಚಾರ್, ಕೆ.ಸಿ.ನಾರಾಯಣ ಗೌಡ, ಕೆ.ಸಿ. ಸದಾನಂದ, ಪಿ.ಎಸ್. ಗಂಗಾಧರ್, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್., ಹೇಮಚಂದ್ರ ಐ.ಕೆ., ನವೀನ್ ಕುಮಾರ್ ಜಾಕೆ, ಶೈಲೇಶ್ ಅಂಬೆಕಲ್ಲು, ಜಯಲಲಿತ ಕೆ.ಎಸ್., ನಳಿನಿ ಸೂರಯ್ಯ, ಲತಾ ಎಸ್. ಮಾವಾಜಿ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಮೇರ್ಕಜೆ ,ಅಂಬೆಕಲ್ಲು ಕುಶಾಲಪ್ಪ, ಮಡಿಕೇರಿ ಶಾಖೆಯ ಸಲಹಾ ಸಮಿತಿ ನಿರ್ದೇಶಕ ನವೀನ್ ಅಂಬೆಕಲ್ ಮತ್ತಿತರರು ಉಪಸ್ಥಿತರಿದ್ದರು.