ಉತ್ತಿಷ್ಯೋತ್ತಿಷ್ಠ ಕಾವೇರಿ ಉತ್ತಿಷ್ಠಾಗಸ್ತö್ಯ ಸುಂದರಿ

ಉತ್ತಿಷ್ಠ ಜಗತಾಂ ಮಾತಃ ತ್ರೆöÊಲೋಕ್ಯಂ ಮಂಗಲA ಕುರು||

ಕಾವೇರಿಯೇ ! ಅಗಸ್ತö್ಯನ ಮಡದಿಯೇ ಪ್ರಪಂಚದ ತಾಯಿಯೇ ಏಳು, ಮೂರು ಲೋಕಕ್ಕೂ ಮಂಗಲವನ್ನುAಟು ಮಾಡು.

ಕಾವೇರಿ ವಿಶ್ವಜನನಿ ಶ್ರುತಿಗೇಯಕೀರ್ತೇ |

ಪಂಕೇರುಹಾಸನಮನಃ ಪ್ರಭವೇ ದಯಾಬ್ದೇ ||

ಕಲ್ಯಾಣಿ ನಿಸ್ವಜನತೋದ್ಧೃತಿಬದ್ಧದೀಕ್ಷೇ |

ಸಹ್ಯಾಚಲೇಂದ್ರತನಯೇ ತವಸುಪ್ರಭಾತಂ||

ಕಾವೇರಿಯೇ, ಲೋಕಮಾತೆಯೇ, ವೇದಗಳಿಂದ ಹಾಡಲ್ಪಟ್ಟ ಕೀರ್ತಿಯುಳ್ಳವಳೇ, ಬ್ರಹ್ಮದೇವನ ಮಾನಸ ಪುತ್ರಿಯೇ, ಮಂಗಲೆಯೇ, ಬಡವರನ್ನು ಉದ್ಧರಿಸಲು ದೀಕ್ಷೆಯನ್ನು ತೊಟ್ಟವಳೇ, ಸಹ್ಯಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ವಿಶ್ವೋದಯಸ್ಥಿತಿ ವಿನಾಶಿನಿದಾನಭೂತೇ |

ಸಂಸಾರ ದುಃಖದವತಪ್ತ ಜನಾಭ್ರವೃಷ್ಟೇ ||

ಗಂಗಾದಿತೀರ್ಥನಿಲಯೇ ಸುಗುಣಾಭಿರಾಮೇ |

ಸಹ್ಯಾಲೇಂದ್ರತನಯೇ ತವ ಸುಪ್ರಭಾತಂ||

ಪ್ರಪAಚದ ಹುಟ್ಟು, ರಕ್ಷೆ ಮತ್ತು ನಾಶಕ್ಕೆ ಕಾರಣಭೂತಳೇ, ಸಂಸಾರದ ದುಃಖವೆಂಬ ಕಾಡ್ಗಿಚ್ಚಿನಿಂದ ಸುಡಲ್ಪಟ್ಟ ಜನರಿಗೆ ಮಳೆಗರೆಯುವ ಮೋಡವೇ, ಗಂಗಾದಿ ತೀರ್ಥಗಳಿಗೆ ಆಶ್ರಯಳೇ, ಸದ್ಗುಣಗಳಿಂದ ಕಂಗೊಳಿಸುತ್ತಿರುವವಳೇ, ಸಹ್ಯಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ಸಂಪತ್ತರAಗಿಣಿ ಸುಧಾಮಯತೋಯಪೂರ್ಣೇ |

ವಂಧ್ಯತ್ವಹಾರಿಣಿ ಕವೇರಕುಲಪ್ರದೀಪೇ ||

ಶ್ರೀರಂಗಧಾಮಮುಖದೈವತಬೃAದವAದ್ಯೇ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಆರ್ಥಿಕ ಪ್ರಗತಿಗೆ ಕಾರಣವೆನಿಸಿದ ನದಿಯೇ, ಅಮೃತಪ್ರಾಯವಾದ ನೀರಿನಿಂದ ತುಂಬಿ ಹರಿಯುವ ನದಿಯೇ, ಬಂಜೆತನವನ್ನು ನಿವಾರಣೆ ಮಾಡುವವಳೇ, ಕವೇರನ ವಂಶಕ್ಕೆ ದೀವಿಗೆಯಂತಿರುವವಳೇ, ಶ್ರೀರಂಗನಾಥಸ್ವಾಮಿ ಮೊದಲಾದ ದೇವತೆಗಳ ಗುಂಪಿನಿAದ ವಂದಿಸಲ್ಪಡುವವಳೇ ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ತೀರದ್ವಯಾಶ್ರಿತ ಮುನೀಂದ್ರ ಕುಟೀರರಮ್ಯೇ |

ಸೌಭಾಗ್ಯಸುಂದರಿ ಕೃಷೀವಲಕಾಮಧೇನೋ ||

ಮಾಂಗಲ್ಯದೇ ಜನನೀ ದಕ್ಷಿಣದೇಶಗಂಗೇ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಇಕ್ಕೆಲಗಳಲ್ಲಿರುವ ಮುನಿಪುಂಗವರ ಆಶ್ರಮಗಳಿಂದ ಶೋಭಿತಗೊಂಡ ವಳೇ, ಸೌಭಾಗ್ಯ ಸುಂದರಿಯೇ, ಕೃಷಿಮಾಡುವ ಜನರಿಗೆ ಕಾಮಧೇನು ವಿನಂತಿರುವವಳೇ, ಮಾಂಗಲ್ಯವನ್ನು ಕೊಡುವವಳೇ, ತಾಯಿಯೇ, ದಕ್ಷಿಣ ದೇಶದ ಗಂಗೆಯೇ ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ನಿದ್ರಾರುಣಂ ತರುಣಕೋಕನದಾಭಮಾಶು |

ಪ್ರೋನ್ಮೀಲ್ಯ ನೇತ್ರಯುಗಲಂ ಕರುಣಾಕಟಾಕ್ಷಾನ್ ||

ದೇವ್ಯದ್ಯಪಾತಯ ಜನೇ ಶರಣಂ ಪ್ರಪನ್ನೇ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ದೇವಿಯೇ, ನಿದ್ದೆಯಿಂದ ಕೆಂಪೇರಿದ, ಆಗ ತಾನೇ ಅರಳಿದ ಕೆಂದಾವರೆಯAತಿರುವ ನಿನ್ನ ಎರಡು ಕಣ್ಣುಗಳನ್ನು ತೆರೆದು, ಈಗ ನಿನಗೆ ಶರಣು ಬಂದ ಜನರ ಮೇಲೆ ಕರುಣೆಯಿಂದ ಕೂಡಿದ ಕಡೆಗಣ್ಣ ನೋಟ ಗಳನ್ನು ಹರಿಸು. ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ಬ್ರಹ್ಯಾಚ್ಯುತಸ್ಮರಹರಾ ನಿಕಟಂ ಪ್ರಭಾತೇ |

ಹಂಸA ಸುವರ್ಣ ಮೃಷಭಂ ಚ ಮುದಾಧಿರುಹ್ಯ ||

ವಾಣ್ಯಾತ್ರಿಯಾ ಗಿರಿಜಯಾ ಚ ಸಹಾಗತಾಸ್ತೇ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಸರಸ್ವತಿ, ಲಕ್ಷಿö್ಮ, ಪಾರ್ವತಿ ಇವರೊಡನೆ ಕ್ರಮವಾಗಿ ಬ್ರಹ್ಮನು ಹಂಸವನ್ನು ವಿಷ್ಣುವು ಗರುಡನನ್ನು ಈಶ್ವರ ಎತ್ತನ್ನು ಏರಿ, ಸಂತೋಷದಿAದ ನಿನ್ನ ಸನಿಹಕ್ಕೆ ಬಂದಿರುವರು. ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ಪಂಚಾನನಸ್ಸು ಚರಿತಂ ತವ ಪಂಚವಕ್ತೆçöÊಃ |

ರಂಸತ್ಯುದಾರಗುಣಗುAಪಿತವೈಭವಾನಿ ||

ಬ್ರಹ್ಮಾಪ್ಯದೀರಯತಿ ತೇ ವದನೈಶ್ಚತುರ್ಭಿಃ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಉದಾತ್ತ ಗುಣಗಳಿಂದ ಕೂಡಿದ ನಿನ್ನ ಮಹತ್ವವನ್ನು ಈಶ್ವರನು ಐದು ಮುಖಗಳಿಂದಲೂ ಹೊಗಳುತ್ತಿರುವನು. ಬ್ರಹ್ಮನೂ ಸಹ ತನ್ನ ನಾಲ್ಕು ಮುಖಗಳಿಂದ ನಿನ್ನ ಗುಣಗಾನ ವನ್ನು ಮಾಡುತ್ತಿರುವನು. ಪರ್ವತಗಳಲ್ಲಿ ಶ್ರೇಷ್ಠವಾದ ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ವಾಣೀ ಚ ತುಂಬುರು ಮುನಿರ್ವರನಾರದೋಪಿ |

ಕಾವೇರಿ ವೈಣಿಕವರಾಸ್ತವ ದಿವ್ಯವೃತ್ತಂ ||

ಗಾಯಂತಿ ತೇ ಸುಖಕರೋ ಭವತು ಪ್ರಬೋಧಃ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ವೀಣಾವಾದನದಲ್ಲಿ ಕುಶಲರೆನಿಸಿದ ಸರಸ್ವತಿ, ತುಂಬುರು ಮುನಿ, ಹಾಗೂ ವೈಣಿಕ ಶ್ರೇಷ್ಠನಾದ ನಾರದನು ನಿನ್ನ ದಿವ್ಯವಾದ ಚರಿತ್ರೆಯನ್ನು ಹಾಡುತ್ತಿರುವರು. ನೀನು ಸುಖದಿಂದ ಎಚ್ಚರಗೊಳ್ಳುವವಳಾಗು, ಸಹ್ಯ ಪರ್ವತದ ನಂದಿನಿಯೇ ನಿನಗೆ ಸುಪ್ರಭಾತವು.

ಬ್ರಹ್ಮಾಗ್ನಿವಾಯುಗಜರಾಜಗಿರೀಂದ್ರ ವಾಸಾಃ |

ಸಪ್ತರ್ಷಯೋದ್ಯ ಸಹ ಶಿಷ್ಯ ಗಣೈರ್ವಿರಾಗಾಃ ||

ಪಾದಾರವಿಂದಮಭಿವAದಿತುಮಾಗತಾಸ್ತೇ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಬ್ರಹ್ಮಗಿರಿ, ಅಗ್ನಿಗಿರಿ, ವಾಯುಗಿರಿ ಮತ್ತು ಗಜರಾಜಗಿರಿ ಈ ನಾಲ್ಕು ಗಿರಿಗಳಲ್ಲಿ ವಾಸವಾಗಿರುವ ಮರೀಚಿ, ಅತ್ರಿ, ಆಂಗಿರಸ, ಪುಲಸ್ತö್ಯ, ಪುಲಹ, ಕ್ರತು ಮತ್ತು ವಸಿಷ್ಠ-ಹೀಗೆ ಏಳು ಋಷಿಗಳು ವೈರಾಗ್ಯದಿಂದ ಕೂಡಿದ್ದು, ತಮ್ಮ ಶಿಷ್ಯವೃಂದದೊಡನೆ ನಿನ್ನ ಅಡಿದಾವರೆಯನ್ನು ವಂದಿಸಲು ಬಂದಿರುವರು, ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ಆಪೂರ್ಯ ಹಸ್ತ ಮುದಕೇನ ತವಾಭಿಷೇಕಂ |

ಕರ್ತುಂ ಪ್ರಯಾಂತಮುದರA ಪೃಥುಲಂ ವಹಂತA ||

ದೃಷ್ಟಾ÷್ವಹಸಂತ್ಯನಿಮಿಷಾಸ್ಸಕಲಾ ಗಣೇಶಂ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಗಣಪತಿಯು ನಿನಗೆ ಅಭಿಷೇಕವನ್ನು ಮಾಡಲು ತನ್ನ ಸೊಂಡಿಲಿನಲ್ಲಿ ನೀರನ್ನು ತುಂಬಿ ಲಂಬೋದರನಾಗಿ ಪ್ರಯಾಣ ಮಾಡುತ್ತಿರುವುದನ್ನು ಕಂಡು, ದೇವತೆಗಳೆಲ್ಲರೂ ಹಸನ್ಮುಖರಾಗಿರುವರು. ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ಮಂದಾರಪೂರ್ವಸುರಪಾದಪಪುಷ್ಪಜಾಲA |

ಗಂಗಾಜಲA ಚ ಮಘವದ್ಗೃಹಿಣೀ ಗೃಹಿತ್ವಾ ||

ಪೂಜಾಂ ವಿಧಾತುಮಮರೀಸಹಿತಾಗತಾಂಕA |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ದೇವಲೋಕದಲ್ಲಿರುವ ಮಂದಾರ ಮೊದಲಾದ ವೃಕ್ಷಗಳಿಂದ ಹೂಗೊಂಚಲುಗಳನ್ನೂ ದೇವಗಂಗೆಯ ನೀರನ್ನೂ ದೇವೇಂದ್ರನ ಮಡದಿಯಾದ ಶಚೀದೇವಿಯು ತೆಗೆದುಕೊಂಡು ದೇವತಾಸ್ತಿçÃಯರಿಂದ ಕೂಡಿಕೊಂಡು ನಿನ್ನ ಪೂಜೆಯನ್ನು ಮಾಡಲಾ ನಿನ್ನ ಬಳಿಗೆ ಬಂದಿದ್ದಾಳೆ. ಸಹ್ಯ ಪರ್ವತದ ಕುವರಿಯಾದ ಕಾವೇರಿಯೇ ನಿನಗೆ ಸುಪ್ರಭಾತವು.

ನೃತ್ಯಂತಿ ಕಾಶ್ಚಿದಪರಾ ಆಪಿ ವಾದಯಂತಿ |

ಗಾಯಂತಿ ಚಾನಿಶಮನುಗ್ರಹಮಾಪ್ತು ಕಾಮಾಃ ||

ವೃಂದಾರಕೇAದ್ರಲಲನಾಃ ಪುರತಃ ಕ್ಷಪಾಂತೇ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ನಿನ್ನ ಅನುಗ್ರಹವನ್ನು ಸಂಪಾದಿಸಲು ಅಭಿಲಾಷೆಯುಳ್ಳ ದೇವತಾಸ್ತಿçà ಯರಲ್ಲಿ ಕೆಲವರು ನರ್ತನ ಮಾಡುತ್ತಲೂ ಕೆಲವರು ವಾದ್ಯಗಳನ್ನು ಬಾರಿಸುತ್ತಲೂ ಕೆಲವರು ಹಾಡುತ್ತಲೂ ಬೆಳಗಿನ ಜಾವದಲ್ಲಿ ನಿನ್ನ ಮುಂದೆ ನಿಂತಿರುವರು. ಪರ್ವತಗಳಲ್ಲಿ ಶ್ರೇಷ್ಠವೆನಿಸಿದ ಸಹ್ಯ ಪರ್ವತದ ಕುವರಿಯೇ ನಿನಗೆ ಸುಪ್ರಭಾತವು.

ಭಾಸ್ವತ್ಸುಧಾಂತುಧರಣೀಸುತರೌಹಿಣೇಯ

ಜೀವೋಶನಶ್ಶನಿತಮಶ್ಮಿಖಿನೋ ಗ್ರಹಾ ಯೇ ||

ಪ್ರಾಪ್ತಾಃ ಪ್ರಣಮ್ರಶಿರಸಸ್ತವದಾಸದಾಸಾಃ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಸೂರ್ಯ, ಚಂದ್ರ, ಅಂಗಾರಕ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಗಳೆಂಬ ನವಗ್ರಹಗಳು ಅತಿ ವಿನಮ್ರರಾಗಿ ನಿನ್ನ ಮುಂದೆ ಬಂದಿರುವರು. ಪರ್ವತ ಶ್ರೇಷ್ಠವೆನಿಸಿದ ಸಹ್ಯಗಿರಿಯ ಮಗಳಾದ ಕಾವೇರಿಯೇ ನಿನಗೆ ಸುಪ್ರಭಾತವು.

ಈಶಾನವಾಸವಕೃಶಾನುಕೃತಾಂತರಕ್ಷೆÆÃ |

ಯಾದಃಪತಿಶ್ವಸನವೈಶ್ರವಣಾದಿಗೀಶಾB ||

ಸಿದ್ಧಾಃ ಪುರಸ್ತವ ಪದಾಬ್ಜ ಸಭಾಜನಾಯ|

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಈಶಾನ್ಯ, ಇಂದ್ರ, ಅಗ್ನಿ, ಯಮ, ನಿಋðತಿ, ವರುಣ, ವಾಯು, ಕುಬೇರ-ಈ ಎಂಟು ಮಂದಿ ದಿಕ್ಪಾಲಕರು ನಿನ್ನ ಪಾದ ಪದ್ಮಗಳನ್ನು ಪೂಜಿಸಲು ನಿನ್ನ ಮುಂದೆ ಸಿದ್ಧರಾಗಿರುವರು. ಎಲೈ ಪರ್ವಗತಳಲ್ಲಿ ಶ್ರೇಷ್ಠವಾದ ಸಹ್ಯಪರ್ವತದ ಮಗಳಾದ ಕಾವೇರಿಯೇ ನಿನಗೆ ಸುಪ್ರಭಾತವು.

ಕೂಜಂತಿ ಕರ್ಣ ಮಧುರಂ ಶುಕಶೋಕಿಲಾದ್ಯಾಃ|

ವೈತಾಲಿಕಾ ಇವ ಸುಮಂಗಲಗಾನಕAಠಾಃ ||

ಉತ್ತಿಷ್ಠ ಮುಂಚ ಶಯನೀಯಮುಪೈತಿ ಕಲ್ಯಂ |

ಸಹ್ಯಾಚಲೇಂದ್ರತನಯೇ ತವ ಸುಪ್ರಭಾತಂ ||

ಗಿಳಿ, ಕೋಗಿಲೆ ಮುಂತಾದ ಹಕ್ಕಿಗಳು ಮಂಗಳಗಾನವನ್ನು ಮಾಡುವ ವೈತಾಲಿಕರಂತೆ ಕಿವಿಗಳಿಗೆ ಇಂಪಾಗಿ ಕೂಗುತ್ತಿವೆ. ಏಳು, ಎದ್ದೇಳು ಉಷಃಕಾಲವು ಬಂತು. ಎಲೈ ಗಿರಿಶ್ರೇಷ್ಠವಾದ ಸಹ್ಯಗಿರಿಯ ಮಗಳೇ ನಿನಗೆ ಸುಪ್ರಭಾತವು. (ಮುಂದುವರಿಯುವುದು.)