ಕರಿಕೆ, ನ. ೧೩: ಅಕ್ರಮವಾಗಿ ಶ್ರೀಗಂಧ ಕಳವು ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.

ಕೇರಳ ಮೂಲದ ಗಿರೀಶ್ ಕೃಷ್ಣನ್ (೩೬), ಕಾನೂರಿನ ಪ್ರದೀಪ್ (೨೦) ಬಂಧಿತರು. ಕಳವು ಮಾಡಿದ್ದ ಮಾಲನ್ನು ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಅರಣ್ಯ ಸಂಚಾರಿ ದಳ ಇಪ್ಪತ್ತು ಸಾವಿರ ಮೌಲ್ಯದ ೧.೮ ಕೆ.ಜಿ. ತೂಕದ ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದೆ.

ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸೀಮಾ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶ್ರೀನಿವಾಸ್ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿ ಚೇತನ್, ಉಪ ವಲಯ ಅರಣ್ಯಾಧಿಕಾರಿ ಗಣಪತಿ, ಚಂದ್ರೇಶ್, ಸುನಿಲ್, ಚಾಲಕ ಪಾಲ್ಗೊಂಡಿದ್ದರು.