ಸೋಮವಾರಪೇಟೆ, ನ. ೧೨: ಪಿಸಿವಿ (ನ್ಯೂಮೋಕಾಕಲ್ ಕಾಂಜುಗೇಟ್) ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಇಂದೂಧರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ, ನ್ಯೂಮೋಕಾಕಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯೂಮೋನಿಯ ಮತ್ತು ಮೆನಿಂಜೈಟಿಸ್ ಖಾಯಿಲೆಗಳಿಂದ ಮಗುವನ್ನು ಪಿಸಿವಿ ಲಸಿಕೆ ರಕ್ಷಿಸುತ್ತದೆ ಎಂದರು.

ಸರ್ಕಾರದಿAದ ಉಚಿತವಾಗಿ ನೀಡುವ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದ್ದು, ಮಗುವಿಗೆ ಒಂದೂವರೆ ತಿಂಗಳು, ಮೂರೂವರೆ ತಿಂಗಳು ಹಾಗೂ ೯ನೇ ತಿಂಗಳಲ್ಲಿ ಒಟ್ಟು ಮೂರು ಪಿಸಿವಿ ಡೋಸ್ ಹಾಕಿಸಬೇಕು. ಸದ್ಯಕ್ಕೆ ಒಂದೂವರೆ ತಿಂಗಳ ಮಗುವಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಶುಶ್ರೂಷಕಿ ಹೆಚ್.ಜಿ. ಶ್ವೇತ, ಡಿ.ಎಂ. ದಿವ್ಯ, ಎಸ್.ಪಿ. ವಸಂತಿ, ಆರ್. ವಿಸ್ಮಿತ ಉಪಸ್ಥಿತರಿದ್ದರು.