ಕೂಡಿಗೆ, ನ. ೧೨: ಕುಶಾಲನಗರ ಮತ್ತು ಅಕ್ಕಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯಿಂದಾಗಿ ಸತತವಾಗಿ ಕಾವೇರಿ ನದಿಯ ಹೆಚ್ಚುವರಿ ನೀರು ಮನೆಗಳಿಗೆ ನುಗ್ಗಿ ಭಾರಿ ಅನಾಹುತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆ ಕುಶಾಲನಗರದ ಆಯ್ದ ಕೆಲ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಮೊದಲ ಹಂತದ ಸರ್ವೆ ಕಾರ್ಯ ಕುಶಾಲನಗರದಿಂದ ಕೂಡಿಗೆವರೆಗೆ ಪ್ರಾರಂಭವಾಗಿದೆ.

ಖಾಸಗಿ ಸರ್ವೆ ಸಂಸ್ಥೆಯ ತಂಡ ಸರ್ವೆ ನಡೆಸಿ ಸಂಪೂರ್ಣವಾದ ಮಾಹಿತಿಯನ್ನು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನೀಡಲಿದೆ. ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಇಂಜಿನಿಯರ್ ಸಿದ್ದರಾಜ್, ಕಿರಣ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.