ಮಡಿಕೇರಿ, ನ. ೧೩: ಕೊಡಗು ಐರಿ ಸಮುದಾಯಗಳ ನಡುವೆ ನಡೆಯುವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಗೆ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಈ ಬಾರಿ ಕೆದಮುಳ್ಳೂರು ಗ್ರಾಮದ ಮುಲ್ಲೆöÊರೀರ ಕುಟುಂಬ ಆತಿಥ್ಯ ವಹಿಸಿದೆ.
ಕ್ರೀಡಾಕೂಟವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿ ಮಾತನಾಡಿ, ಸಮಾಜಗಳು ಒಗ್ಗಟ್ಟಾದರೆ ದೇಶ ಒಗ್ಗಟ್ಟಾಗುತ್ತದೆ. ದೇಶಕ್ಕೆ ಎದುರಾಗಿರುವ ಕೊರೊನಾ ಆತಂಕ ದೂರವಾಗಿ ಜಿಲ್ಲೆಯ ಕ್ರೀಡಾಚಟುವಟಿಕೆಗಳು ಮರು ಆರಂಭವಾಗುತ್ತಿರುವುದು ಸಂತಸದ ವಿಚಾರ. ಕ್ರೀಡೆಗಳಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಕೌಟುಂಬಿಕ ಕ್ರೀಡಾಕೂಟಗಳಿಂದ ಸಂಬAಧಗಳು ಗಟ್ಟಿಯಾಗುತ್ತವೆ ಎಂದ ಅವರು, ಶಿಕ್ಷಣದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ಆಸಕ್ತಿ ವಲಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕೊಡಗು ಐರಿ ಸಮಾಜ ಅಧ್ಯಕ್ಷ ಮೇಲತ್ತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಮುಲ್ಲೆöÊರೀರ ಕಪ್ ಕ್ರಿಕೆಟ್ ಸಮಿತಿ ಅಧ್ಯಕ್ಷ ಗೋಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
(ಮೊದಲ ಪುಟದಿಂದ) ವೇದಿಕೆ ಸಮಾರಂಭಕ್ಕೂ ಮುನ್ನ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಈ ಸಂದರ್ಭ ಸುಮಾರು ಎಂಟು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಕ್ರೀಡಾಕೂಟದಲ್ಲಿ ಈ ಬಾರಿ ೧೪ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸುತ್ತಿವೆ.
ದಿನದ ಮೊದಲ ಪಂದ್ಯದಲ್ಲಿ ಇಬ್ನಿವಳವಾಡಿ ಗ್ರಾಮದ ಮಾಲೆರ ತಂಡ ನಾಪೋಕ್ಲುವಿನ ಟೀಮ್ ಹಿಲ್ ತಂಡವನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿತು. ಬೇತ್ರಿ ಗ್ರಾಮದ ಆಲಚಂಡ ತಂಡವನ್ನು ಮಣಿಸಿದ ಹಾಲಿ ಚಾಂಪಿಯನ್ ಬಲ್ಲಮಾವಟಿ ಐರೀರ ತಂಡ ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿತು.
ಫಲಿತಾಂಶ
ತಟ್ಟಂಡ ಬೇಂಗ್ ನಾಡ್ ಮತ್ತು ಕಾಮೆಯಂಡ ಕುಂಜಿಲಗೆರಿ ತಂಡಗಳ ಮಧ್ಯೆ ನಡೆದ ಮೂರನೇ ಪಂದ್ಯದಲ್ಲಿ ತಟ್ಟಂಡ ತಂಡ ಜಯಭೇರಿ ಬಾರಿಸಿತು. ಬೆಪ್ಪುನಾಡ್ ಬ್ಲಾಕ್ ಕ್ಯಾಟ್ಸ್ ತಂಡ, ಮಕ್ಕಂದೂರಿನ ಆಯಪಂಡ ವಾರಿಯರ್ಸ್ ತಂಡವನ್ನ ಮಣಿಸಿ ಎರಡನೇ ಹಂತ ಪ್ರವೇಶಿಸಿತು. ಮತ್ತೊಂದು ಪಂದ್ಯದ ರೋಚಕ ಹೋರಾಟದಲ್ಲಿ ತಟ್ಟಂಡ ಬೊಮ್ಮಂಜಿ ತಂಡ ಸೂಪರ್ ಓವರ್ನಲ್ಲಿ ಐಮಂಡÀ ತಂಡವನ್ನು ಮಣಿಸಿತು. ದಿನದ ಕೊನೆ ಪಂದ್ಯದಲ್ಲಿ ಅಪ್ಪಚ್ಚಂಡ ಮೂರ್ನಾಡು ತಂಡ, ಹೊದ್ದೂರು ಗ್ರಾಮದ ಅಮ್ಮಣ್ಣಂಡ ಕೆಂದುAಬಿ ಬಾಯ್ಸ್ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು.