ಸೋಮವಾರಪೇಟೆ, ನ .೧೩ : ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣೆ ನಿಗದಿಯಾಗಿರುವ ಬೆನ್ನಲ್ಲೇ ಕರ್ನಾಟಕದ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೂ ಚುನಾವಣೆ ಘೋಷಣೆ ಯಾಗುವ ಸಾಧ್ಯತೆಯಿದ್ದು, ಕೊಡಗಿನಲ್ಲೂ ಆಕಾಂಕ್ಷಿಗಳು ಈಗಾಗಲೇ ಅಖಾಡಕ್ಕಿಳಿಯಲು ಸಜ್ಜುಗೊಳ್ಳುತ್ತಿದ್ದಾರೆ.

ತಾ. ೨೧ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆ ನಿಗದಿ ಯಾಗಿದ್ದು, ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್‌ನ ಮೊದಲನೇ ವಾರದಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೂ ಚುನಾವಣೆ ನಿಗದಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಸ್ಪರ್ಧಾಳುಗಳು ಈಗಾಗಲೇ ಚುನಾವಣಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದ ೫ ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದ್ದು, ೩೪ ನಿರ್ದೇಶಕರನ್ನು ಚುನಾಯಿಸಬೇಕಿದೆ. ಇದರಲ್ಲಿ ಕೊಡಗಿನಿಂದಲೂ ಓರ್ವ ನಿರ್ದೇಶಕ ಆಯ್ಕೆಯಾಗಬೇಕಿದೆ. ಈಗಾಗಲೇ ಸದಸ್ಯತ್ವ ನೋಂದಣಿ ಮುಕ್ತಾಯಗೊಂಡಿದೆ. ಕಳೆದ ಸಾಲಿನ ಚುನಾವಣೆಯಲ್ಲಿ ಹಾಸನದಲ್ಲಿ ಪೈಂಟ್ ಮಳಿಗೆ ಇಟ್ಟುಕೊಂಡಿರುವ, ಸೋಮವಾರಪೇಟೆ ಸಮೀಪದ ಹೊನವಳ್ಳಿಯ ನಂಟು ಹೊಂದಿರುವ ಹೆಚ್.ಕೆ. ಶೇಖರ್ ಅವರು ಜಯ ಗಳಿಸಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.

ಕಳೆದ ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಘಟಾನುಘಟಿಗಳ ನಡುವೆ ಶೇಖರ್ ಅವರು ಜಯ ಸಾಧಿಸುವ ಮೂಲಕ ಹಲವರ ಹುಬ್ಬೇರಿಸಿದ್ದರು. ಅರಕಲಗೂಡಿನ ಶಾಸಕರಾಗಿದ್ದ ಎ. ಮಂಜು ಸೇರಿದಂತೆ ಸೋಮವಾರಪೇಟೆ ಹರಪಳ್ಳಿಯ ಕೃಷಿಕ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹೆಚ್.ಎನ್. ರವೀಂದ್ರ, ಹೈಕೋರ್ಟ್ ವಕೀಲ ಸಂದೀಪ್ ಅವರುಗಳು ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಶೇಖರ್ ಅವರು ಜಯಗಳಿಸುವ ಮೂಲಕ ಕೊಡಗು ಜಿಲ್ಲೆಯನ್ನು ರಾಜ್ಯದಲ್ಲಿ ಪ್ರತಿನಿಧಿಸಿದ್ದರು. ೨೦೧೪ರಲ್ಲಿ ಅಪ್ಪಾಜಿ ಗೌಡ ಅಧ್ಯಕ್ಷರಾದರು. ನಂತರ ಬೆಟ್ಟೇಗೌಡ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ನಂತರ ಹಲವಷ್ಟು ಗೊಂದಲಗಳು ಏರ್ಪಟ್ಟಿದ್ದರಿಂದ, ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳುವ ಮೊದಲೇ ಸರ್ಕಾರ ಮಧ್ಯಪ್ರವೇಶಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ೨೦೧೯ರಂದೇ ಆಡಳಿತ ಮಂಡಳಿಯ ಚುನಾವಣೆ ನಡೆಯ ಬೇಕಿತ್ತು. ಆದರೆ ಸದಸ್ಯತ್ವ ನೋಂದಣಿ ಮುಕ್ತಾಯಗೊಂಡಿದೆ. ಕಳೆದ ಸಾಲಿನ ಚುನಾವಣೆಯಲ್ಲಿ ಹಾಸನದಲ್ಲಿ ಪೈಂಟ್ ಮಳಿಗೆ ಇಟ್ಟುಕೊಂಡಿರುವ, ಸೋಮವಾರಪೇಟೆ ಸಮೀಪದ ಹೊನವಳ್ಳಿಯ ನಂಟು ಹೊಂದಿರುವ ಹೆಚ್.ಕೆ. ಶೇಖರ್ ಅವರು ಜಯ ಗಳಿಸಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.

ಕಳೆದ ೨೦೧೩ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಘಟಾನುಘಟಿಗಳ ನಡುವೆ ಶೇಖರ್ ಅವರು ಜಯ ಸಾಧಿಸುವ ಮೂಲಕ ಹಲವರ ಹುಬ್ಬೇರಿಸಿದ್ದರು. ಅರಕಲಗೂಡಿನ ಶಾಸಕರಾಗಿದ್ದ ಎ. ಮಂಜು ಸೇರಿದಂತೆ ಸೋಮವಾರಪೇಟೆ ಹರಪಳ್ಳಿಯ ಕೃಷಿಕ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹೆಚ್.ಎನ್. ರವೀಂದ್ರ, ಹೈಕೋರ್ಟ್ ವಕೀಲ ಸಂದೀಪ್ ಅವರುಗಳು ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಶೇಖರ್ ಅವರು ಜಯಗಳಿಸುವ ಮೂಲಕ ಕೊಡಗು ಜಿಲ್ಲೆಯನ್ನು ರಾಜ್ಯದಲ್ಲಿ ಪ್ರತಿನಿಧಿಸಿದ್ದರು. ೨೦೧೪ರಲ್ಲಿ ಅಪ್ಪಾಜಿ ಗೌಡ ಅಧ್ಯಕ್ಷರಾದರು. ನಂತರ ಬೆಟ್ಟೇಗೌಡ ಅಧ್ಯಕ್ಷ ಸ್ಥಾನ ಅಲಂಕರಿಸಿದರು. ನಂತರ ಹಲವಷ್ಟು ಗೊಂದಲಗಳು ಏರ್ಪಟ್ಟಿದ್ದರಿಂದ, ಆಡಳಿತ ಮಂಡಳಿಯ ಅವಧಿ ಪೂರ್ಣಗೊಳ್ಳುವ ಮೊದಲೇ ಸರ್ಕಾರ ಮಧ್ಯಪ್ರವೇಶಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. ೨೦೧೯ರಂದೇ ಆಡಳಿತ ಮಂಡಳಿಯ ಚುನಾವಣೆ ನಡೆಯ ಬೇಕಿತ್ತು. ಆದರೆ (ಮೊದಲ ಪುಟದಿಂದ) ಆಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಉಚಿತ ಸದಸ್ಯತ್ವ ಮಾಡಿದ್ದಾರೆ. ಸಂಘದ ಸದಸ್ಯತ್ವಕ್ಕೆ ೧ ಸಾವಿರ ಶುಲ್ಕವಿದ್ದು, ತಾವುಗಳೇ ಶುಲ್ಕ ಪಾವತಿಸಿ ಸದಸ್ಯತ್ವ ಮಾಡಿಸುವ ಮೂಲಕ ವೋಟ್ ಬ್ಯಾಂಕ್ ಭದ್ರಪಡಿಸಿಕೊಂಡಿದ್ದಾರೆ.

ಕಳೆದ ೨೦೧೩ರ ಚುನಾವಣೆಯಲ್ಲಿ ಇದೇ ತಂತ್ರದ ಆಧಾರದ ಮೇಲೆ ಅಭ್ಯರ್ಥಿಗಳು ಜಯಗಳಿಸಿದ್ದರು ಎಂಬ ಮಾತುಗಳು ಒಕ್ಕಲಿಗ ಸಂಘದ ಮತದಾರರ ನಡುವೆ ಹರಿದಾಡುತ್ತಿದೆ. ಕಳೆದ ಬಾರಿ ಸೋಲನ್ನಪ್ಪಿದ ಹರಪಳ್ಳಿ ರವೀಂದ್ರ ಅವರು ಈ ಬಾರಿ ಅತೀ ಹೆಚ್ಚಿನ ಸದಸ್ಯತ್ವ ಮಾಡಿಸಿದ್ದು, ಚುನಾವಣಾ ಅಖಾಡಕ್ಕೆ ತಮ್ಮ ತಂಡದೊAದಿಗೆ ಈಗಾಗಲೇ ಧುಮುಕಿದ್ದಾರೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಸಭೆಗಳನ್ನು ನಡೆಸಿ, ತಮ್ಮ ಸ್ಪರ್ಧೆಯನ್ನು ಖಚಿತಗೊಳಿಸಿದ್ದಾರೆ.

ಈ ನಡುವೆ ಸೋಮವಾರಪೇಟೆ ಒಕ್ಕಲಿಗರ ಸಂಘದ ಅಧ್ಯಕ್ಷ, ರಾಜ್ಯ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಾಕಾಂಕ್ಷಿಯಾಗಿದ್ದ ಎ.ಆರ್. ಮುತ್ತಣ್ಣ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಘೋಷಣೆ ಮಾಡಿದ್ದು, ರವೀಂದ್ರ ಅವರು ಸೋಮವಾರಪೇಟೆ ಒಕ್ಕಲಿಗರ ಸಂಘಕ್ಕೆ ಹೆಚ್ಚಿನ ಸಹಾಯ ಕಲ್ಪಿಸುವ ಭರವಸೆ ನೀಡಿರುವುದರಿಂದ ತಾವು ವೈಯುಕ್ತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಕಳೆದ ಸಾಲಿನ ಚುನಾವಣೆವರೆಗೂ ರಾಜ್ಯ ಸಂಘದ ಚುನಾವಣೆ ನಡೆಯುವದೇ ತಿಳಿಯುತ್ತಿರಲಿಲ್ಲ. ಆದರೆ ಶೇಖರ್ ಮತ್ತು ಎ. ಮಂಜು ಅವರ ಎಂಟ್ರಿಯಿAದಾಗಿ ಒಕ್ಕಲಿಗರ ಸಂಘದ ಚುನಾವಣೆ ಕೊಡಗಿನಲ್ಲೂ ಹವಾ ಎಬ್ಬಿಸಿತ್ತು. ಯಾವ ವಿಧಾನ ಸಭಾ ಚುನಾವಣೆಗೂ ಕಡಿಮೆ ಇಲ್ಲ ಎಂಬಷ್ಟರ ಮಟ್ಟಿಗೆ ಚುನಾವಣಾ ಅಖಾಡ ಬಿಸಿಯೇರಿತ್ತು.

ಅವಿರೋಧ ಆಯ್ಕೆಗೆ ಪ್ರಯತ್ನ: ಚುನಾವಣೆ ಬದಲಿಗೆ ಜಿಲ್ಲೆಯಿಂದ ಅವಿರೋಧವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಈ ಹಿಂದಿನಿAದಲೂ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನ ಫಲಕೊಡುವುದೇ ಅಥವಾ ಚುನಾವಣೆ ನಡೆಯುವುದೇ ಎಂಬುದನ್ನು ಕಾದುನೋಡಬೇಕಿದೆ.

- ವಿಜಯ್ ಹಾನಗಲ್