ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹ

ಬೆಂಗಳೂರು, ನ. ೧೨: ರಾಜಕೀಯ ವಿವಾದಕ್ಕೆ ಕಾರಣವಾಗಿರುವ ಬಿಟ್‌ಕಾಯಿನ್ ಹ್ಯಾಕಿಂಗ್ ಪ್ರಕರಣಕ್ಕೆ ಸಂಬAಧಿಸಿದAತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿದ್ದು, ಸುಪ್ರೀಂ ಕೋರ್ಟ್ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ತನಿಖೆಯಾಗಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಟ್‌ಕಾಯಿನ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ. ರಾಜ್ಯ ಸರ್ಕಾರದ ಸಂಸ್ಥೆಗಳ ಮೇಲೆ ತಮಗೆ ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಆರೋಪಿಯು ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮನಸ್ಸನ್ನು ಬದಲಾಯಿಸುವ ಮಾದಕ ದ್ರವ್ಯಗಳನ್ನು ಏಕೆ ನೀಡಲಾಯಿತು ಎಂಬುದನ್ನು ಸರ್ಕಾರ ವಿವರಿಸಬೇಕು ಎಂದರು. ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳು ಹಾಗೂ ಸಚಿವರಿಗೆ ತಿಳಿಯದಂತೆ ಈ ರೀತಿ ಮಾಡಬಹುದೇ? ಎಂದು ಪ್ರಶ್ನಿಸಿದರು.

ಡೇಟಾ ಸುರಕ್ಷತೆ ಮಸೂದೆಗೆ ತ್ವರಿತವಾಗಿ ಅಂಗೀಕಾರ

ತಿರುವನAತಪುರA, ನ. ೧೨: ಡೇಟಾ ಸುರಕ್ಷತೆ ಮಸೂದೆಗೆ ತ್ವರಿತವಾಗಿ ಅಂಗೀಕಾರ ನೀಡುವ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ. ೨೦೧೯ ರಲ್ಲಿ ಸಂಸತ್‌ನಲ್ಲಿ ಡೇಟಾ ಸುರಕ್ಷತೆ ಮಸೂದೆ ಮಂಡನೆಯಾಗಿತ್ತು. ಇತ್ತೀಚಿನ ವರ್ಚ್ಯುಯಲ್ ಜಗತ್ತಿನಲ್ಲಿ ಡೇಟಾ ಕಳ್ಳತನ ಸಾಮಾನ್ಯವಾಗಿದ್ದು, ಡೇಟಾ ಸುರಕ್ಷತೆ ಮಸೂದೆ ತ್ವರಿತವಾಗಿ ಅಂಗೀಕಾರವಾಗಬೇಕಿದೆ ಎಂದು ಹೇಳಿದ್ದಾರೆ. ಕೇರಳ ಪೊಲೀಸರು ಆಯೋಜಿಸಿದ್ದ ಛಿ೦ಛಿ೦ಟಿನ ೧೪ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿರುವ ರಾವತ್, ನಮ್ಮ ಡಿಜಿಟಲ್ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ವಿವಿಧ ರಾಜ್ಯ ಸರ್ಕಾರಗಳ ಸೈಬರ್ ಭದ್ರತಾ ತಜ್ಞರ ಪ್ರಯತ್ನಗಳನ್ನು ಸಂಯೋಜಿಸಬೇಕು ಎಂದು ಹೇಳಿದ್ದಾರೆ.

ಬಸ್‌ನಲ್ಲಿ ಜೋರಾಗಿ ಹಾಡು ಹಾಕುವಂತಿಲ್ಲ

ಬೆAಗಳೂರು, ನ. ೧೧: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಮೊಬೈಲ್‌ನಲ್ಲಿ ಜೋರಾಗಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕುವುದನ್ನು ನಿರ್ಬಂಧಿಸಿ ಆದೇಶಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಕರ್ನಾಟಕ ರಾಜ್ಯ ಸಾರಿಗೆ ನಿಗಮ, ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಬಸ್‌ಗಳಲ್ಲಿ ಕಿರಿಕಿರಿ ಉಂಟು ಮಾಡುವ ರೀತಿಯಲ್ಲಿ ಹಾಡುಗಳನ್ನು ಹಾಕುತ್ತಾರೆ. ಇದರಿಂದ ಶಬ್ಧ ಮಾಲಿನ್ಯ ಉಂಟಾಗುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆ ಆದೇಶಿಸಿದ್ದು, ಉಲ್ಲಂಘನೆಯಾದಲ್ಲಿ ಪ್ರಯಾಣಿಕರಿಗೆ ಕರ್ತವ್ಯನಿರತ ಸಿಬ್ಬಂದಿಗಳು ತಿಳುವಳಿಕೆ ನೀಡುವುದು ಹಾಗೂ ಹೆಚ್ಚಾಗಿ ಶಬ್ಧ ಬರುವಂತೆ ಹಾಗೂ ಸಹಪ್ರಯಾಣಿಕರಿಗೆ ತೊಂದರೆಯಾದಲ್ಲಿ ಅಂತವರನ್ನು ವಿನಂತಿಸುವುದು. ಅದಕ್ಕೆ ಮನ್ನಣೆ ನೀಡದಿದ್ದಲ್ಲಿ ಪ್ರಯಾಣ ದರ ಹಿಂತಿರುಗಿಸದೆ ಬಸ್‌ನಿಂದ ಇಳಿಸುವಂತೆ ಆದೇಶಿಸಿದೆ.

ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಲ್ಲಿ ಬದಲಾವಣೆ

ಬೆಂಗಳೂರು, ನ. ೧೨: ರಾಜ್ಯ ಸರ್ಕಾರವು ಈ ವರ್ಷಾಂತ್ಯದೊಳಗೆ ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಪ್ರಕಟಿಸುವ ಸಾಧ್ಯತೆ ಯಿದೆ ಎಂದು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಲೀಲಾ ಪ್ಯಾಲೇಸ್‌ನಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟ, ಭಾರತೀಯ ರಕ್ಷಣಾ ಉತ್ಪಾದಕರ ಸಂಘದ ಸಹಯೋಗ ದೊಂದಿಗೆ ಅಮೇರಿಕಾ ಮುಂಚೂಣಿ ರಕ್ಷಣಾ ಉತ್ಪಾದನಾ ಸಂಸ್ಥೆ ಲಾಕ್‌ಹೀಡ್ ಮಾರ್ಟಿನ್ ಆಯೋಜಿಸಿದ್ದ ೮ನೇ ವಾರ್ಷಿಕ ಪೂರೈಕೆದಾರರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗ ವಹಿಸಿ ಮಾತಾನಾಡಿದ ಅವರು, ರಕ್ಷಣಾ ಸಂಬAಧಿ ಉದ್ದಿಮೆಗಳನ್ನು ಆಕರ್ಷಿಸಲು ಪ್ರಸ್ತುತ ಜಾರಿಯಲ್ಲಿರುವ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯಲ್ಲಿ ಅಗತ್ಯ ಬದಲಾವಣೆ ತರಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಹೊಸ ನೀತಿಯು ಮೂಲ ಉಪಕರಣ ತಯಾರಕರನ್ನು ರಾಜ್ಯಕ್ಕೆ ಸೆಳೆಯುವುದರ ಮೇಲೆ ಕೇಂದ್ರೀಕರಿಸುತ್ತದೆ. ಕೇವಲ ಬೆಂಗ ಳೂರಿನಲ್ಲಿ ಮಾತ್ರವಲ್ಲದೆ ತುಮಕೂರು, ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿಯೂ ಕ್ಲಸ್ಟರ್‌ಗಳ ಸ್ಥಾಪನೆಗೆ ಚಿಂತನೆಗಳು ನಡೆಯುತ್ತಿವೆ ಎಂದರು.