*ಗೋಣಿಕೊಪ್ಪ, ನ. ೧೨: ಆಜಾದಿ ಕೀ ಅಮೃತ್ ಮಹೋತ್ಸವದ ಅಂಗವಾಗಿ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಆಶ್ರಮ ಶಾಲೆಯಲ್ಲಿ ಪಾನ್ ಇಂಡಿಯಾ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಯಿತು.
ಪೊನ್ನಂಪೇಟೆ ನ್ಯಾಯಾಲಯದ ನ್ಯಾಯಾಧೀಶ ಗಿರಿಗೌಡ ಅವರು ಕಾನೂನು ಅರಿವು ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದರು. ಸಾರ್ವಜನಿಕರು ಕಾನೂನುಗಳನ್ನು ತಿಳಿದುಕೊಂಡು ಕಾನೂನು ತೊಡಕುಗಳಿಂದ ಪಾರಾಗುವ ಅರಿವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಅಪರ ಸರ್ಕಾರಿ ವಕೀಲೆ ಕಂಜಿತAಡ ಅನಿತಾ ಮಾತನಾಡಿ, ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಮುತ್ತಪ್ಪ, ಉಪಾಧ್ಯಕ್ಷ ಮೋನು ಉತ್ತಪ್ಪ, ಸದಸ್ಯ ಪ್ರತಿಷ್ಠ ಹಾಗೂ ಗ್ರಾ.ಪಂ. ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ವಿಜಯ, ವಲಯ ಅರಣ್ಯಾಧಿಕಾರಿ ಕಿರಣ್ಕುಮಾರ್, ಎಸ್.ಸಿ.ಎಫ್. ಉತ್ತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಜಗದೀಶ್ ಹಾಜರಿದ್ದರು. ಅರಣ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಲಯ ಅರಣ್ಯಾಧಿಕಾರಿಗಳು ಅರಣ್ಯ ಹಕ್ಕುಕಾಯ್ದೆ ಬಗ್ಗೆ ಅರಿವಿಕೆ ನೀಡಿದರು.