ನಾಪೆೆÇÃಕ್ಲು, ನ. ೧೨: ೨೦೧೫ ರಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭ ಸಾವನ್ನಪ್ಪಿದ ವಿಶ್ವ ಹಿಂದೂ ಪರಿಷತ್ ಮುಖಂಡ ದೇವಪ್ಪಂಡ ಕುಟ್ಟಪ್ಪ ಅವರ ಹೆಸರಿನಲ್ಲಿ ಇಲ್ಲಿನ ರಾಮ ಮಂದಿರದ ಗಣಪತಿ ದೇವಾಲಯದಲ್ಲಿ ಶಾಂತಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಆರ್.ಎಸ್.ಎಸ್. ಮುಖಂಡ ಕಂಗಾAಡ ಜಾಲಿ ಪೂವಪ್ಪ, ವಿಶ್ವ ಹಿಂದೂ ಪರಿಷತ್‌ನ ಕೆಲೇಟೀರ ಸಾಬು ನಾಣಯ್ಯ, ಬಿ.ಜೆ.ಪಿ. ತಾಲೂಕು ಕೃಷಿ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಖಜಾಂಚಿ ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಬಿ.ಜೆ.ಪಿ. ತಾಲೂಕು ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್, ಶಕ್ತಿ ಕೇಂದ್ರದ ಸಹ ಸಂಚಾಲಕ ಕೆಲೇಟಿರ ದೀಪು ದೇವಯ್ಯ, ಕೀಕಂಡ ರಾಜ ಮೇದಪ್ಪ, ಕುಟ್ಟಂಜೆಟ್ಟೀರ ಪೂಣಚ್ಚ, ಬಡ್ಡೀರ ಸಂಜು ಸುಬ್ಬಯ್ಯ, ಕೇಟೋಳಿರ ಡಾಲಿ ಅಪ್ಪಚ್ಚ, ಬಿದ್ದಾಟಂಡ ವಿವೇಕ್ ಮತ್ತಿತರರು ಇದ್ದರು.