ಮಡಿಕೇರಿ, ನ. ೧೨: ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದ ೮ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮತ್ತು ೧೫ ಅಂಗನವಾಡಿ ಕೇಂದ್ರದ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದು ತಾತ್ಕಾಲಿಕವಾಗಿ ಗುರುತಿಸಿ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಪ್ರಕಟಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ತಾ. ೧೮ ರ ಸಂಜೆ ೫.೩೦ ರೊಳಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತಿçÃಶಕ್ತಿ ಭವನ ಕಟ್ಟಡ, ತಾಲೂಕು ಪಂಚಾಯಿತಿ ಕಚೇರಿ ಆವರಣ, ಸೋಮವಾರಪೇಟೆ, ಇವರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸುವಂತೆ ಸೋಮವಾರಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.
ಹಾಗೆಯೇ ವೀರಾಜಪೇಟೆ ತಾಲೂಕು ಪೊನ್ನಂಪೇಟೆಯ ವ್ಯಾಪ್ತಿಯಲ್ಲಿ ನವೆಂಬರ್ ೯ ರಂದು ಗುರುತಿಸಲಾದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಂಭವನೀಯ ಪಟ್ಟಿಯನ್ನು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಈ ಬಗ್ಗೆ ಸಂಬAಧಿಸಿದವರಿAದ ಆಕ್ಷೇಪಣೆಗಳಿದ್ದಲ್ಲಿ ತಾ. ೧೭ ರಂದು ಸಂಜೆ ೫.೩೦ ರೊಳಗೆ ಸೂಕ್ತ ದಾಖಲಾತಿಯೊಂದಿಗೆ ಮನವಿಯನ್ನು ಖುದ್ದಾಗಿ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಗೆ ಸಲ್ಲಿಸಬೇಕು ಎಂದು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.