ವೀರಾಜಪೇಟೆ, ನ. ೧೦: ಟಿಪ್ಪು ಜಯಂತಿಯ ವೇಳೆಯಲ್ಲಿ ಹಲ್ಲೆಗೆ ಒಳಗಾಗಿ ಮೃತರಾದ ಸಂಘದ ಪ್ರಮುಖರಾದ ದೇವಪಂಡ ಕುಟ್ಟಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂಪರ ಸಂಘಟನೆಗಳ ವತಿಯಿಂದ ವೀರಾಜಪೇಟೆ ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲ ಆಂಜನೇಯ ದೇವಾಲಯದಲ್ಲಿ ಕುಟ್ಟಪ್ಪ ಅವರಿಗೆ ಶಾಂತಿ ಪೂಜೆ ನೆರವೇರಿಸಲಾಯಿತು.

ಕುಟ್ಟಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಕೀಲ ಮತ್ತು ನಗರ ಭಾ.ಜ.ಪ ಅಧ್ಯಕ್ಷ ಟಿ.ಪಿ. ಕೃಷ್ಣ ಅವರು; ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿ ರಾಜ್ಯದ ಎಲ್ಲಡೆ ಆಚರಿಸಲಾಯಿತು. ಜಯಂತಿ ಆಚರಣೆಯನ್ನು ವಿರೋಧಿಸಿ ಸಂಘ ಪರಿವಾರವು ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ ತಡೆ ಒಡ್ಡಿತ್ತು. ಗಲಭೆಯಲ್ಲಿ ಅನೇಕರು ಗಾಯಾಳುವಾದರು. ಕುಟ್ಟಪ್ಪ ಅವರು ಪ್ರಾಣ ಕಳೆದುಕೊಂಡರು. ಕುಟ್ಟಪ್ಪ ಅವರು ಹುತಾತ್ಮರಾಗಿದ್ದಾರೆ.

ಇಂದು ಅವರ ಸ್ಮರಣೆಗಾಗಿ ದೇವಾಲಯದಲ್ಲಿ ಹಿಂದೂ ಸಂಘಟನೆಗಳ ಪರವಾಗಿ ಶಾಂತಿ ಪೂಜೆ ನೆರವೇರಿಸಲಾಗಿದೆ. ಕುಟ್ಟಪ್ಪ ಅವರ ಜಯಂತಿ ಎಂದೆAದಿಗೂ ಚಿರಸ್ಮರಣೆಯಾಗಿರುತ್ತದೆ ಎಂದು ಹೇಳಿದರು.

ಶಾಂತಿ ಪೂಜೆ ವೇಳೆಯಲ್ಲಿ ಭಜರಂಗದÀಳ ಜಿಲ್ಲಾ ಸಹ ಸಂಚಾಲಕ್ ವಿವೇಕ್ ರೈ, ದುರ್ಗಾವಾಹಿನಿ ಜಿಲ್ಲಾ ಸಂಚಾಲಕಿ ಅಂಬಿಕಾ ಉತ್ತಪ್ಪ, ಹಿಂದೂ ಜಾಗರಣ ವೇದಿಕೆಯ ತಾಲೂಕು ಅಧ್ಯಕ್ಷ ಬಿ.ಎನ್. ಯೋಗೇಶ್, ತಾಲೂಕು ಗೋ ರಕ್ಷಕ್ ಪ್ರಮುಖ್ ಸಜನ್ ಗಣಪತಿ, ಆರ್.ಎಸ್.ಎಸ್. ಪ್ರಮುಖರಾದ ಬಿ.ವಿ. ಹೇಮಂತ್, ವಲಯ ಭಾ.ಜ.ಪ ಅಧ್ಯಕ್ಷ ರಂಜಿ ದಿಲನ್, ಸಂಘ ಪರಿವಾರದ ಕಾರ್ಯಕರ್ತರು ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು. -ಕೆ.ಕೆ.ಎಸ್.