ವೀರಾಜಪೇಟೆ, ನ. ೧೦: ಪೊಂಬೊಳ್ಚ ನೂತನ ಕೊಡವ ಕೂಟ ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ಕೋಟೇರ ಪೂಣಚ್ಚ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಾಕೋಟುಪರಂಬು ಶ್ರೀ ಕಾಲಬೈರವ ದೇವಾಲಯ ಸಭಾಂಗಣದಲ್ಲಿ ಮಾಳೇಟಿರ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಮಾಳೇಟಿರ ಶ್ರೀನಿವಾಸ್, ಗೌರವ ಅಧ್ಯಕ್ಷರಾಗಿ ಬೊಪ್ಪಂಡ ಸರಳ ಕರುಂಬಯ್ಯ, ಕಾರ್ಯದರ್ಶಿಯಾಗಿ ಕಾಣತಂಡ ವಿವೇಕ್ ಅಯ್ಯಪ್ಪ, ಸಹಕಾರ್ಯದರ್ಶಿಯಾಗಿ ಮಾತಂಡ ದೇಚಮ್ಮ ಅಚ್ಚಯ್ಯ, ಖಜಾಂಚಿಯಾಗಿ ಬೊಟ್ಟಂಗಡ ತಿಲಕ್ ಮಾದಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಚಂಗೇಟಿರ ಕುಮಾರ್ ಸೋಮಣ್ಣ, ಸಮಿತಿ ಸದಸ್ಯರಾಗಿ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ಮುಕ್ಕಾಟಿರ ಮೌನಿ ನಾಣಯ್ಯ, ಚೇನಂಡ ತೇಜ ಬೋಪಣ್ಣ, ಮೇಚುವಂಡ ಚೇತನ್ ಭೀಮಯ್ಯ, ಅಮ್ಮಾಟಂಡ ವಿಂದ್ಯ ದೇವಯ್ಯ, ಮುಲ್ಲೇರ ಮಧು ಮಂಜುನಾಥ್, ಪಳಂಗಿಯAಡ ಶರತ್ ಬೋಪಣ್ಣ, ಕಾಣತಂಡ ಭವ್ಯ ದೇವಯ್ಯ, ಶಿವಚಾಳಿಯಂಡ ರೋಹಿಣಿ ಕಿಶೋರ್ ಇವರುಗಳು ಆಯ್ಕೆಯಾಗಿದ್ದಾರೆ.