ಸುAಟಿಕೊಪ್ಪ, ನ. ೧೦: ಗಣೇಶ ಚಿತ್ರ ಮಂದಿರದಲ್ಲಿ ಬೆಳಗ್ಗಿನ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಚಿತ್ರನಟ ನಿಧನ ಹೊಂದಿದ್ದ ಪುನೀತ್ ರಾಜ್‌ಕುಮಾರ್ (ಅಪ್ಪು) ಅವರ ೧೨ನೇ ದಿನಕ್ಕೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು.

ಸುಂಟಿಕೊಪ್ಪ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಗಣೇಶ್ ಚಿತ್ರ ಮಂದಿರದ ಸಿಬ್ಬಂದಿಗಳು ಭಾವಚಿತ್ರವನ್ನು ಇರಿಸಿ ಮೊಂಬತ್ತಿ ಬೆಳಗಿಸಿ ಮೌನ ಪ್ರಾರ್ಥನೆ ಮಾಡಿ ಶ್ರದ್ಧಾಂಜಲಿಯನ್ನು ಆರ್ಪಿಸಿ ನಂತರ ಸಿಹಿ ಹಂಚಲಾಯಿತು. ಸುಂಟಿಕೊಪ್ಪ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಈ ಸಂದರ್ಭ ಒತ್ತಾಯಿಸಿದರು. ಗಣೇಶ ಚಿತ್ರ ಮಂದಿರದ ವ್ಯವಸ್ಥಾಪಕ ರಮೇಶ್ ಬಾಬು, ಸಿಬ್ಬಂದಿಗಳು ಹಾಜರಿದ್ದರು.